Thursday, July 11, 2013

ಕನ್ನಡ - ಅಳಿವು, ಉಳಿವು

ನಮ್ಮ ಜೀವನದಲ್ಲಿ ಲಹರಿ(ಮಗಳು)ಯ ಆಗಮನವಾಗಿ ಒಂದು ವರ್ಷವಾಗುತ್ತಾ ಬಂತು. ಬರೆಯಬೇಕೆಂದು ಹೊರಟ ಅನೇಕ ವಿಷಯಗಳು ಮನದ ಮೂಲೆಯಿಂದ ಆಗೊಮ್ಮೆ ಈಗೊಮ್ಮೆ ಎದು್ದ "ನೀನು ಇದನ್ನು ಯೋಚಿಸಿ ಒಂದೂವರೆ ವರ್ಷವಾಯಿತು" ಎಂದು ಅಣಕಿಸಿ, "ನಾಳೆ ಬರೆದೇ ತೀರುತೇ್ತನೆ" ಎಂದು ಘೋಷಿಸಿ ಹೊದ್ದು ಮಲಗುವಂತೆ ಮಾಡುತ್ತಿವೆ ಅಷ್ಟೆ.
ಈಗ ಹೇಳುತ್ತಿರುವುದು ಹಳೆಯ ವಿಚಾರ. ನಾನು ಉದೋ್ಯಗಸ್ಥಳಾಗಿದ್ದಾಗಿನದ್ದು. (ಉದೋ್ಯಗ ಬಿಟ್ಟು ಒಂದು ವರ್ಷ ಮೇಲಾಯಿತು).
ಆಫೀಸಿನಲ್ಲೊಮ್ಮೆ ಭಾಷೆಗಳ ವಿಚಾರವೇನೋ ಮಾತಾಡುತ್ತಿದ್ದಾಗ ಮಲಯಾಳದಲ್ಲಿ ವಿವಿಧ ರೀತಿಯ "ಲ" ಉಚ್ಛಾರಗಳಿವೆ ಎಂದರು. ತಮಿಳಿನಲ್ಲೂ ಇದೆ ಎಂದು ತಿಳಿಯಿತು. (ಇಂಗೀ್ಲಷ್ ನಲ್ಲಿ ಬರೆಯುವಾಗ ತಮಿಳಿನ ಒಂದು "ಲ" ಮಾದರಿಯ ಪದವನ್ನು "zh" ಎಂದು ಬರೆಯುತ್ತಾರೆ.) ನಾನು ನನ್ನ ತಮಿಳ ಸಹೋದೋ್ಯಗಿಯ ಬಳಿ ಕೇಳಿದೆ. "ಹಾಗಾದರೆ ತಮಿಳು ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?". ಆತ ಕಕ್ಕಾಬಿಕ್ಕಿಯಾಗಿ "ಹ್ಹಿ ಹ್ಹಿ ಹ್ಹಿ" ಎಂದ!
"ಅರೆ! ಗೊತ್ತಿಲ್ಲವೇನು?" ಎಂದೆ. (ತಮಿಳರು ಅತಿ ದೊಡ್ಡ ಭಾಷಾಭಿಮಾನಿಗಳೆಂದು ಕೇಳಿದೇ್ದನೆ.)
ಆತ ಕೆಲ ಕ್ಷಣಗಳ ನಂತರ google search ಮಾಡುತ್ತಿದ್ದುದು ಕಂಡಿತು. ಸಮಾಧಾನವಾಗಲಿಲ್ಲವೆಂದು ತೋರುತ್ತದೆ. ಇನೋ್ನರ್ವನನು್ನ ಕರೆತಂದನು.
ಅದೇ ಪ್ರಶ್ನೆ ಕೇಳಿದೆ. ಉತ್ತರ ಗೊತ್ತಿಲ್ಲವೆಂದಾಯಿತು. "ಲೆಕ್ಕ ಹಾಕೋಣ. ಕ, ಚ, ಟ, ತ, ಪ ಹೇಳಿರಿ" ಎಂದೆ.
ಪರಮಾಶ್ಚರ್ಯ! "ಗ, ಜ, ಡ, ದ, ಬ ಇಲ್ಲ" ಎಂದರು.
"ಇಲ್ಲದೆ ಎಲ್ಲಿ ಹೋಗುತ್ತದೆ? 'ಸಿಂಗಂ' ಎಂದು ಸಿನೆಮಾ ಇಲ್ಲವೇ? ಅದನ್ನು ಹೇಗೆ ಬರೆಯುತೀ್ತರಿ?" ಎಂದು ಕೇಳಿದೆ.
"ಸಿಂಕಂ ಎಂದು ಬರೆಯುತೇ್ತವೆ. ಸಿಂಗಂ ಎಂದು ಓದುತೇ್ತವೆ" ಎಂದರು.
"ಅದು ಹೇಗೆ ಗೊತಾ್ತಗುತ್ತದೆ? 'ಕ' ಬೇಕೋ, 'ಗ" ಬೇಕೋ?" ಎಂದರೆ, "ಸಂದರ್ಭಾನುಸಾರ, ಅರ್ಥಾನುಸಾರ" ಎಂಬ ಉತ್ತರ ಬಂತು.
ಹೊಸದಾಗಿ ಭಾಷೆ ಕಲಿಯುವವರ ಗತಿ ಗೋ…ವಿಂದ ಎಂದುಕೊಂಡೆ. ಪದಗಳು ಗೊತ್ತಿದ್ದರೆ ತಾನೇ 'ಕ', 'ಗ' ಎಲ್ಲಿ ಬೇಕೆಂದು ತಿಳಿಯುವುದು. ಪದ ಕಲಿತ ನಂತರ ಅಕ್ಷರ ಕಲಿಯಬೇಕೇ? ಗೊಂದಲಕ್ಕಿಟ್ಟುಕೊಂಡು ಮಾತು ಅಲ್ಲಿಗೇ ನಿಂತಿತು.
(ಹೀಗಾದರೆ ಬೆಂಗಳೂರಿನ "ಕೋಣನ ಕುಂಟೆ", "ಕೋಣನ ಕುಂಡೆ" ಆದೀತೆಂದು ಮನದಲೇ್ಲ ನಗು ಬಂತು).

ಎಷೋ್ಟ ಸಮಯ ನಂತರ ಪತ್ರಿಕೆಯಲ್ಲಿ ಭಾಷಾ ಸರಳೀಕರಣದ ಬಗ್ಗೆ ಲೇಖನ ನೋಡಿದಾಗ ತಮಿಳಿನ "ಗ, ಜ, ಡ, ದ, ಬ" (ಮಹಾಪಾ್ರಣ ಕೂಡಾ) ಅಕ್ಷರಗಳು ಸರಳೀಕರಣಕ್ಕೆ ಬಲಿಯಾದವು ಎಂಬ ಅಸ್ಟಷ್ಟ ಚಿತ್ರಣ ಸಿಕ್ಕಿತು. (ಇದು ತಪ್ಪಿದ್ದರೆ ತಿದ್ದಿ).

ಆದರೆ ಈ ಘಟನೆ ನನ್ನ ಯೋಚನೆಯನ್ನೇ ಬದಲಿಸಿತು. ಭಾಷಾಭಿಮಾನಕ್ಕೆ ಹೆಸರುವಾಸಿಯಾದ ತಮಿಳರು ವರ್ಣಮಾಲೆಯ ಅಕ್ಷರಗಳೆಷ್ಟಿವೆ ಎಂದು ತಿಳಿದಿರದಿದ್ದರೆ, ತಮಿಳಿನ ಸ್ಥಿತಿ ಕನ್ನಡಕ್ಕಿಂತ ಹೆಚ್ಚು ಭಿನ್ನವಾಗಿ ಏನೂ ಇಲ್ಲ ಎನಿಸಿತು. ಹಾಗೆ ನೋಡಿದರೆ ಕನ್ನಡ ಭಾಷೆಗೆ ಅಳಿವಿನ risk ಎಷ್ಟು ಇದೆಯೋ, ಉಳಿದ ಭಾಷೆಗಳಿಗೂ ಅಷೇ್ಟ ಇದೆ ಅನಿಸಿತು.
ಬರಿಯ ಆಡುಮಾತಿನಲ್ಲಿ ಭಾಷೆ ಎಷ್ಟು ಶುದ್ಧವಾಗಿ ಉಳಿದೀತು? ಆಂಗ್ಲ ಪದಗಳೊಂದಿಗೆ ಬೆರೆತು ಅನೇಕ ಪದಗಳೇ ಅಳಿದು ಹೋದಾವು. ಭಾಷೆ ಉಳಿಯಬೇಕಾದರೆ ಆಡು ಮಾತಿಗಿಂತ ಹೆಚ್ಚಾಗಿ ಸಾಹಿತ್ಯದಲ್ಲಿ ಕಾಣಬೇಕು. ಬರಹ, ಓದುಗಳ ಮೂಲಕ ಪದಗಳು ಜನರನ್ನು ತಲುಪಬೇಕು. ಸಾಹಿತ್ಯ ಸೃಷ್ಡಿಯ ಜೊತೆ ಓದುಗರೂ ಹೆಚ್ಚಾಗಬೇಕು. ಇಲ್ಲವಾದಲ್ಲಿ "evening walking ಬರುತೀ್ತಯಾ?" ಎನ್ನುವುದೇ ಕನ್ನಡ ಎಂದು ತೃಪ್ತಿ ಪಡಬೇಕಾದೀತು.
No comments: