Tuesday, November 6, 2007

ಪ್ಲಾಸ್ಟಿಕ್ ಪ್ಲಾಸ್ಟಿಕ್

ಹೀಗೇ ಒ೦ದು ದಿನ ಪ್ಲಾಸ್ಟಿಕ್ ಕೈಚೀಲಗಳನ್ನು ಓರಣವಾಗಿ ಜೋಡಿಸುತ್ತಿದ್ದೆ. ಎಷ್ಟೊ೦ದು ಚೀಲಗಳು! ಏತಕ್ಕಾಗಿ? ಜೋಡಿಸಿಟ್ಟು ಪ್ರಯೋಜನವೇನು? "ಚೆನ್ನಾಗಿದೆ, ದೊಡ್ಡದಿದೆ, ಎ೦ದಾದರೂ ಉಪಯೋಗಕ್ಕೆ ಬ೦ದೀತು" ಎ೦ಬ ಹುಚ್ಚು ಕಲ್ಪನೆಯಲ್ಲಿ ಇಟ್ಟಕೊಳ್ಳುತ್ತಿದ್ದೆ. ಬಳಕೆಗೆ ಬೇಕಾದಾಗ ಚೆನ್ನಾಗಿರುವುದನ್ನು ಉಳಿಸಿಕೊ೦ಡು ಮಿಕ್ಕವನ್ನು ಉಪಯೋಗಿಸುತ್ತಿದ್ದೆ. ಕಟ್ಟಿ ಇಡುವುದು ಯಾಕಾಗಿ ಎ೦ದು ಇನ್ನೂ ತಿಳಿದಿಲ್ಲ.
Municipality ತೊಟ್ಟಿಗಳಲ್ಲಿ ತು೦ಬಿ ತುಳುಕುವ, ಸುಟ್ಟರೆ ಅಸಹ್ಯ ವಾಸನೆಯ, ಚೀಲಗಳನ್ನು ಕ೦ಡು, ಕೊನೆಗೂ ಹೊಸ ಪ್ಲಾಸ್ಟಿಕ್ ಕೈಚೀಲ ಪಡೆಯಲಾರೆ ಎ೦ದು ನಿರ್ಧರಿಸಿದೆ. ನಿಜಕ್ಕೂ ಪ್ರತಿ ಬಾರಿ ಹೊಸ ಚೀಲ ಪಡೆಯುವ ಅಗತ್ಯವಿಲ್ಲ. ಈಗ ನನ್ನ vanity bag ಒಳಗೆ ದೊಡ್ಡ ಪ್ಲಾಸ್ಟಿಕ್ ಚೀಲವೊ೦ದನ್ನು ಸದಾ ಇಟ್ಟುಕೊಳ್ಳುತ್ತೇನೆ. ಅ೦ಗಡಿಗಳಲ್ಲಿ ಸಾಮಾನಿನೊ೦ದಿಗೆ ಕೊಟ್ಟ ಚೀಲವನ್ನು "cover ಬೆೇಡ" ಎ೦ದು ಹಿ೦ತಿರುಗಿಸುವಾಗ ಒ೦ದು ರೀತಿಯ ಹೆೆಮ್ಮೆಯೆನಿಸುತ್ತದೆ. Cover ಮರಳಿ ಪಡೆಯುವವರ ಮುಖದಲ್ಲಿ ಮುಗುಳ್ನಗು ಕ೦ಡಾಗ ನಾನು ಏನೋ ಒಳ್ಳೆ ಕೆಲಸ ಮಾಡುತ್ತಿದ್ದೆೇನೆ ಎ೦ದು ಅನಿಸಿ ಸ೦ತಸವಾಗುತ್ತದೆ ;-) ನೀವೂ Try ಮಾಡಿ ನೋಡಿ.

Saturday, November 3, 2007

ಪುಸ್ತಕ ಪ್ರಿಯರಿಗಾಗಿ

ಓದುವುದು ನನ್ನ ಹವ್ಯಾಸ. ಆದರೆ ಕೆಲವು ಪುಸ್ತಕಗಳು ಕುತೂಹಲಕಾರಿಯಾಗಿ ಓದಿಸಿಕೊ೦ಡು ಹೋಗುತ್ತಾ ಓದುವಿಕೆಯನ್ನು ಹವ್ಯಾಸ ಬಿಡಿ, ಗೀಳಿನ೦ತೆ ಹಿಡಿಸಿಬಿಡುತ್ತವೆ. ಇ೦ಥದೇ ಒ೦ದು ಗೀಳನ್ನು ನೇಮಿಚ೦ದ್ರ ಅವರ ಪುಸ್ತಕಗಳು ನನಗೆ ಹಿಡಿಸಿವೆ. ನಾನು ಅವರ ಪುಸ್ತಕಗಳನ್ನು ಓದಲು ಆರ೦ಭಿಸಿದ್ದು ಒ೦ದು ವರ್ಷ ಹಿ೦ದೆ.

ಮೊದಲಿಗೆ ನಾನು ಓದಿದ್ದು ಅವರ ಪ್ರವಾಸ ಕಥನ, "ಪೆರುವಿನ ಪವಿತ್ರ ಕಣಿವೆಯಲ್ಲಿ". ಇಬ್ಬರೇ ಮಹಿಳೆಯರು ತಮ್ಮದೇ ರೀತಿಯಲ್ಲಿ ದಕ್ಷಿಣ ಅಮೆರಿಕೆಯ ಪೆರುವನ್ನು ಸುತ್ತಿ, ಅಮೆಜಾನ್ ನದಿಯಲ್ಲಿ ವಿಹರಿಸಿ ಬ೦ದ ಅಪೂರ್ವ ಪ್ರವಾಸದ ಕಥೆ ಅದು. ಐತಿಹಾಸಿಕ ವಿಷಯಗಳನ್ನೂ ತಿಳಿಸುತ್ತ ಹೋಗುವ ಈ ಪುಸ್ತಕ, ಬಹಳ informative ಆಗಿರುವುದಲ್ಲದೆ, ಅವರ ದಿಟ್ಟತನ, ಆತ್ಮವಿಶ್ವಾಸಗಳನ್ನು ತೋರಿಸುತ್ತಾ ಸ್ಪೂರ್ತಿಯನ್ನು ನೀಡುತ್ತದೆ.

ಅವರ "ಬದುಕು ಬದಲಿಸಬಹುದು" ಚಿಕ್ಕ ಚಿಕ್ಕ ಲೇಖನಗಳ ಸ೦ಗ್ರಹವಾಗಿದೆ. ಓದು ಪ್ರಿಯರಿಗೆ ಉದುಗೊರೆಯಾಗಿ ಕೊಡಬಹುದಾದ ಪುಸ್ತಕವದು.

ಹೀಗೆ ಅವರ ಬರಹಗಳ ಅಭಿಮಾನಿಯಾದ ನಾನು, ಇತ್ತೀಚೆಗೆ "ಯಾದ್ ವಶೇಮ್" ಪುಸ್ತಕವನ್ನು ಓದಿದೆ. ಒ೦ದು ರೀತಿ ಉದಾಸೀನದ೦ತೆ ನಿಧಾನವಾಗಿ ಆರ೦ಭವಾದ ಕಥೆ, ಮು೦ದುವರಿದನ್ತೆ ಕುತೂಹಲ ಕೆರಳಿಸುತ್ತಾ ಹೋಯಿತು. ಜರ್ಮನಿಯ ನಾಜಿಗಳ ಪೈಶಾಚಿಕ ಕ್ರಿತ್ಯದಿ೦ದ ತಪ್ಪಿಸಿಕೊ೦ಡು ಭಾರತಕ್ಕೆ ತ೦ದೆಯೊಡನೆ ಓಡಿ ಬ೦ದ ಹ್ಯಾನಾಳ ಕಥೆ ಅದು. ಭಾರತದ ಮಣ್ಣಲ್ಲಿ ಬೆಳೆಯುವ ಆಕೆ, ತಾನು ಜರ್ಮನಿಯಲ್ಲಿ ಬಿಟ್ಟು ಬ೦ದ ಅಕ್ಕ, ತಮ್ಮ ಮತ್ತು ಅಮ್ಮನ ಬಗ್ಗೆ ತಿಳಿಯಲು ದಶಕ ದಶಕಗಳ ಕಾಲ ಕಾಯುತ್ತಾಳೆ. ಕೊನೆಗೂ ಇಸ್ರೇಲ್ ನಲ್ಲಿ ಭೇಟಿಯಾಗುವ ಅಕ್ಕನೊಡನೆ ಕೆಲ ದಿನಗಳನ್ನು ಕಳೆಯುವ ಹ್ಯಾನಾ, ತನ್ನ ಮತ್ತು ಆಕೆಯ ನಡುವಿನ opinion difference ಅರಿತು ಭಾರತಕ್ಕೆ ಭಾರತೀಯಳಾಗಿ ಹಿ೦ತಿರುಗುವ ಸ೦ದರ್ಭ ಮನಸು ತಟ್ಟುತ್ತದೆ. ಇಲ್ಲಿಯೂ ಲೇಖಕಿ ಕಾದ೦ಬರಿಯನ್ನು ಬರೆಯ ಕಥೆಯನ್ನಾಗಿ ಇಡದೆ, ತು೦ಬ informative ಆಗಿ ಮಾದಿಡ್ದಾರೆ. ಒದುತ್ತ ಹೋದ೦ತೆ ಈ ಪುಸ್ತಕ ಬರೆಯಲು ಅವರು ತು೦ಬ ಶ್ರಮವಹಿಸಿರುವುದು ಅರಿವಾಗುತ್ತದೆ.

ನವಕರ್ನಾಟಕ ಪ್ರಕಾಶನದ ವ್ಯಕ್ತಿ ವಿಕಸನ ಮಾಲೆಯಲ್ಲಿ ನೇಮಿಚ೦ದ್ರ ಅವರ "ದುಡಿವ ಹಾದಿಯಲ್ಲಿ ಜೊತೆಯಾಗಿ" ಈ ವರ್ಷ ಮುದ್ರಿತವಾಗಿದೆ. ಪತಿಪತ್ನಿಯರು ದುಡಿಮೆಯ ಜೊತೆಗೆ ಸ೦ಸಾರವನ್ನು ಸರಿದೂಗಿಸಿಕೊ೦ಡು ಹೋದ ಅನೇಕ ಉದಾಹರಣೆಗಳು ಈ ಪುಸ್ತಕದಲ್ಲಿ ಇದ್ದು, ಸ್ಪೂರ್ತಿದಾಯಕವಾಗಿವೆ.

ಇದೆಲ್ಲವನ್ನು blogನಲ್ಲಿ ಬರೆದ ಉದ್ದೇಶವೆನೆ೦ದರೆ, ನೀವೂ ಈ ಪುಸ್ತಕಗಳನ್ನು ಸಿಕ್ಕಾಗ ಮಾತ್ರವಲ್ಲ, ಕೊ೦ಡು ಓದಿ ಎ೦ದು. ಆಮೇಲೆ discuss ಮಾಡೋಣ. :-)

ಅರ್ಥವಾಗದ ಬೋರ್ಡುಗಳು

ಮೊನ್ನೆ ಬಸ್ಸಲ್ಲಿ ಹೊಗುವಾಗ ಕೆಲವು ವಿಚಿತ್ರ ಹೆಸರುಗಳ ಬೋರ್ಡ್ ಗಳನ್ನು ನೋಡಿದೆ. ಮೋಟಾರು ರಿಪೇರಿ ಅ೦ಗಡಿ ಮು೦ದೆ "ಅಚಲ ಮೋಟರ್ಸ್" ಎ೦ದಿದೆ. ಅ೦ದರೆ ಹಾಳಾಗಿರುವ ಗಾಡಿ ಮು೦ದೆ ಚಲಿಸುವುದೇ ಇಲ್ಲವೆ೦ದೇ? ಹಳೆಯ ಕಟ್ಟಡದ ಮೇಲೆ ದೊಡ್ಡದಾಗಿ ಬರೆದಿತ್ತು, "ಶಿಥಿಲ್ ಟವರ್ಸ್"! ಶಿಥಿಲವಾಗಿ ಬೀಳಲಿದೆ ಎ೦ದೇ? ಅಲ್ಲಿ ಇರುವವರ ಗತಿ ಏನು? ಗೂಡಿನ೦ಥ ಹೊಟೆಲ್ ಮು೦ದೆ ಬಳಪದ ಬೋರ್ಡು ತೋರಿಸಿತ್ತು, "ಶ್ರೀ ಕೃಷ್ಣ ಮೀನು ಸಿಗುತ್ತದೆ". ಮೀನಿನ ಹೆಸರು ಶ್ರೀ ಕ್ರಿಷ್ಣ ಎ೦ದೇ? ಅಥವಾ ಶ್ರೀ ಕೃಷ್ಣ ಎ೦ಬ ಹೆಸರಿನವನಿಗೆ ಮಾತ್ರ ಮೀನು ಸಿಗಿವುದು ಎ೦ದೇ? ಒ೦ದೂ ಅರ್ಥ ಆಗಲಿಲ್ಲ. ನಿಮಗೆ ತಿಳಿದರೆ ಹೇಳಿ.

Thursday, November 1, 2007

ರಾಜ್ಯೋತ್ಸವ ಶುಭಾಶಯಗಳು.