3-4 ವರ್ಷಗಳ ಹಿಂದಿನ ಮಾತು. ನಾನು ಹಾಸ್ಟೆಲಲ್ಲಿ, ಪೇಯಿಂಗ್ ಗೆಸ್ಟ್ ಆಗಿ ಕಳೆದ ದಿನಗಳು. ಮದುವೆ, ಪೂಜೆ ಇತರ ಸಮಾರಂಭಗಳಿಗೆ ಒಮ್ಮೊಮ್ಮೆ ಹೋಗಬೇಕಾಗುತ್ತಿತ್ತು. ಅಲ್ಲಿ ಅನೇಕ ಸಂಬಂಧಿಗಳು ಸಿಗುತ್ತಿದ್ದರು. ಅನೇಕ ಹೆಂಗಸರನ್ನು ನೋಡಿ ಮಾತ್ರ ನೆನಪಿರುತ್ತಿತ್ತು. ಅವರು ಏನು, ಎಲ್ಲಿ ಇರುವುದು, ನನಗೆ ಯಾವ ರೀತಿ ಸಂಬಂಧಿಕರು? ಇವೆಲ್ಲ ನೆನಪೇ ಇರುತ್ತಿರಲಿಲ್ಲ. ಅದನ್ನು ತಿಳಿಯುವ ಆಸಕ್ತಿಯೂ ಇರುತ್ತಿರಲಿಲ್ಲ.
ಕೆಲವರಂತೂ ಕಂಡಾಕ್ಷಣ "ನನ್ನ ಗುರುತು ಸಿಕ್ಕಿತಾ?" ಎಂದು ಕೇಳುವುದು; ಹೌದೆಂದರೆ "ಹಾಗಾದರೆ ಯಾರೆಂದು ಹೇಳು" ಎಂದು ಪೀಡಿಸುವುದು ಮತ್ತೆ ನಾನು "ಅದೂ...ಆ..." ಎಂದು ತೊದಲಿದಾಗ "ನಾನು ನಿನ್ನ ಅಜ್ಜಿಯ ಸೋದರ ಮಾವನ....." ಎಂದು ಬಿಡಿಸಲಾರದ ಒಗಟೊಂದನ್ನು ನನ್ನ ಮುಂದಿಡುವುದು ಮಾಡುತ್ತಿದ್ದರು.
ಇನ್ನು ಕೆಲವರು ನಾನು ಹಾಸ್ಟೆಲಲ್ಲಿ ಯಾ ಪೇಯಿಂಗ್ ಗೆಸ್ಟ್ ಆಗಿ ಇರುವುದೆಂದು ತಿಳಿದ ಕೂಡಲೇ "ಬೆಳಗ್ಗೆ ಏಳುವುದು ಎಷ್ಟು ಗಂಟೆಗೆ? ತಿಂಡಿಗೆ ಏನು ಕೊಡುತ್ತಾರೆ? ಮಧ್ಯಾಹ್ನ ಊಟಕ್ಕೇನು ಕೊಡುತ್ತಾರೆ? ಎಷ್ಟು ಹೊತ್ತಿಗೆ ಊಟ? ಸ್ನಾನಕ್ಕೆ ಬಿಸಿನೀರು ಇದೆಯಾ?" ಎಂದೆಲ್ಲ ನಾನು ಗಣನೆಗೇ ತೆಗೆದುಕೊಂಡಿರದ ವಿಷಯಗಳನ್ನು ಕೇಳುತ್ತಾರೆ. ನಾನು ಎಷ್ಟೋ ಬಾರಿ "ನಾನು ಹೇಗಿದ್ದರೆ ಇವರಿಗೇನಪ್ಪಾ" ಎಂದು ಆಶ್ಚರ್ಯಪಟ್ಟಿದ್ದೇನೆ. ಈ ಅಪ್ರಯೋಜಕ ಕಾಡು ಹರಟೆಗಿಂತ ಏನಾದರೂ ಒಳ್ಳೆಯ ವಿಚಾರ ಮಾತಾಡಿದರೆ ಆಗುವುದಿಲ್ಲವೇ ಅಥವಾ ಸುಮ್ಮನಿರುವುದು ಒಳ್ಳೆಯದಲ್ಲವೇ? ಎಂದು ಅನಿಸಿದ್ದಿದೆ. ಇದನ್ನು ಕೆಲವರ ಬಳಿ ಹೇಳಲು ಹೋಗಿ "ಏನೂ ಮಾತನಾಡದೆ ಹೋದರೆ relations ಉಳಿಯುವುದು ಹೇಗೆ? ಇಷ್ಟಕ್ಕೂ ಅವರು ಹಾಗೆ ಕೇಳಿದರೆ ತಪ್ಪೇನಿದೆ?" ಎಂದೂ ನಾನು ಬೈಸಿಕೊಂಡದ್ದಿದೆ.
ಏನೇ ಇರಲಿ ನನಗಂತೂ ಈರೀತಿ ಹರಟುವುದಕ್ಕಿಂತ "blank" ಆಗಿ ಒಂದೆಡೆ ಕುಳಿತಿರುವುದು ಇಷ್ಟವಾಗುತ್ತದೆ. "blank" ಆಗಿರುವುದು ಹೇಗೆಂದು ಇನ್ನೊಮ್ಮೆ ಹೇಳುತ್ತೇನೆ.
ಮದುವೆಯಾದ ನಂತರ ಈ ಪ್ರಶ್ನೆಗಳ ಸ್ವರೂಪ ಬದಲಾಗಿದೆ. ಮಾತ್ರ ಅಷ್ಟೇ ಅಪ್ರಯೋಕವಾಗಿವೆ. "ಅಡುಗೆಗೆ ಏನು ಮಾಡುವುದು?", "ಇಬ್ಬರೂ ಕೆಲಸಕ್ಕೆ ಹೋಗುವಾಗ lunch box ಕೊಂಡೊಯ್ಯುತ್ತೀರಾ?", "ರಾತ್ರಿಗೆ ಅಡುಗೆ ಬೆಳಗ್ಗೆ ಮಾಡಿದುವುದಾ?", "ಎಷ್ಟು ಹೊತ್ತಿನ ಬಸ್ ಪ್ರಯಾಣ?" ಇತ್ಯಾದಿ. ಆದರೆ ಈಗ ನನಗೆ ಇವಕ್ಕೆ ಉತ್ತರಿಸುವುದರಲ್ಲಿ ತಪ್ಪು ಕಾಣುವುದಿಲ್ಲ. ಪ್ರಶ್ನೆಗಳು ಮೊದಲಿನಷ್ಟು irritate ಆಗುವುದಿಲ್ಲ.
ತೀರ ಇತ್ತೀಚೆಗಷ್ಟೇ ಯೋಚಿಸಿದೆ... ಈ ಬದಲಾವಣೆಗೆ ಕಾರಣ ಏನಿರಬಹುದೆಂದು. ಇನ್ನೂ ಗೊತ್ತಾಗಿಲ್ಲ. ಸಹನೆ ಹೆಚ್ಚಿದೆಯೇ? ಅಲ್ಲಾ ನಾನು ಇವನ್ನು tolerate ಮಾಡಲು ಕಲಿತಿರುವೆನೇ? ಇದಕ್ಕೇ maturity ಎನ್ನುವುದೇ? ಅಥವಾ ನನ್ನಲ್ಲಿ ಮಾತನಾಡಲು ವಿಷಯಗಳು ಮುಗಿದುಹೋಗಿವೆಯೇ?
ನಾನು ಇದನ್ನು ಇಷ್ಟಪಡುತ್ತಿದ್ದೇನೆಯೇ? ಅಯ್ಯೋ... ಹಾಗಾದರೆ ನಾನು ಮುಂದೊಂದು ದಿನ ಇವರಂತೆ ಬೇರೆಯವರ ತಲೆತಿನ್ನಲಿದ್ದೇನೆಯೇ? ನನಗೆ ವಯಸ್ಸಾಗುತ್ತಿರುವುದರ ಸೂಚನೆಯೇ? ಹಾ.. ಹೆದರಿಕೆಯಾಗತೊಡಗಿದೆ.
ವರ್ಷಗಳು ಉರುಳಿದಂತೆ ಜ್ಞಾನ ಹೆಚ್ಚಬೇಕು, ಅನಗತ್ಯ ಮಾತು ಕಡಿಮೆಯಾಗಬೇಕು ಎಂದು ನನ್ನ ಭಾವನೆ. ನನ್ನ ಜ್ಞಾನ ವೃದ್ಧಿಯಾಗುವುದು ನಿಂತಿದೆಯೇ? ತಲೆ ಬಡ್ಡಾಗುತ್ತಿದೆಯೇ? (ಮಂಗಳೂರು ಕಡೆ ಇದರ ಅರ್ಥ, ಮೆದುಳು sharpness ಕಳೆದುಕೊಂಡಿದೆ ಎಂದು) ಹಾಗಿದ್ದರೆ ನಾನು ಏನು ಮಾಡುತ್ತಿದ್ದೇನೆ? ಯೋಚಿಸತೊಡಗಿದ್ದೇನೆ.
ಇದಕ್ಕಾಗಿ ಹೊಸವರ್ಷದಲ್ಲಿ resolution ತೆಗೆದುಕೊಳ್ಳಲು ಆಲೋಚಿಸಿದ್ದೇನೆ.
ಈ ವರ್ಷದಿಂದ ಮುಂದೆಂದಿಗೂ ಅನಗತ್ಯ ಹರಟೆಯಲ್ಲಿ ತೊಡಗಲಾರೆ. ಅಥವಾ ಹೀಗೆ ಹೇಳಲೇನೋ... ಈ ವರ್ಷದಿಂದ ಮುಂದೆ ನಾನು knowledge ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತೇನೆ. (ಇದರಿಂದ ಅನಗತ್ಯ ಹರಟೆ ತಂತಾನೇ ಮರೆತುಹೋಗುವುದೆಂಬ ಅನಿಸಿಕೆ)... ಏನೋ... resolution ಏನು ಎಂದೂ ಹೊಳೆಯುತ್ತಿಲ್ಲ!!
5 comments:
ಚೈತ್ರಿಕಾ, ಒಮ್ಮೆ ನಾನೂ ಹೀಗೆ ಯೋಚಿಸಿದ್ದಿದೆ. ಆದರೆ ಇದು ತೀರಾ ಸಾಮಾನ್ಯ. ಬಂಧುಗಳು ಸಿಕ್ಕಾಗ ಈ ರೀತಿ ಕೇಳುವುದು ಸಹಜ. ನಿಮಗೆ ಸಂಬಂಧಗಳು ಬೇಡ ಅನಿಸಬಹುದು, ಅವರು ಯಾರಾದರೆ ನನಗೇನು ಅನಿಸಬಹುದು ಈಗ. ಆದರೆ ಅವರಿಗೆ ಇವರು ನಮ್ಮ ರಕ್ತ ಸಂಬಂಧಿ, ಪರಿಚಯಸ್ತರು, ಇಂತವರ ಮಕ್ಕಳು ಎಂಬ ಒಂದು ಪ್ರೀತಿ, ಅಭಿಮಾನ ಇರುತ್ತದೆ. ನಮ್ಮ ಜೀವನಶೈಲಿ ಬಗ್ಗೆ ಕಾಳಜಿ, ಕುತೂಹಲ ಇರುತ್ತದೆ. ಅದಕ್ಕೇ ಕೇಳುತ್ತಾರೆ. ಯಾವುದೋ ಮದುವೆ, ಮುಂಜಿಗಳಲ್ಲಿ ಸಿಕ್ಕಾಗ ಅಥವಾ ಯಾರಾದರೂ ಮನೆಗೆ ಬಂದಾಗ ಜ್ಞಾನ ವೃದ್ಧಿ ಎಂದು ಐನ್ ಸ್ಟೈನ್ ಥಿಯರಿ ಚರ್ಚೆ ಮಾಡಲಿಕ್ಕಾಗುವುದಿಲ್ಲ. ಅಲ್ಲಿ ಕುಶಲ ವಿಚಾರಣೆಯೇ ಮುಖ್ಯ. ಇದೆಲ್ಲುದರಿಂದ ಜ್ಞಾನ ವೃದ್ಧಿಗೆ ಯಾವುದೆ ಅಡ್ಡಿ ಇಲ್ಲ, ಸಂಬಂಧವೂ ಇಲ್ಲ. ಯಾರೊಡನೆಯೂ ಮಾತಾಡದೇ ಇದ್ದು ಜ್ಞಾನ ಜಾಸ್ತಿ ಮಾಡಿಕೊಳ್ಳುತ್ತೇನೆ ಎನ್ನುವುದು ಅಸಂಬದ್ಧ ಎಂದು ನನ್ನನಿಸಿಕೆ. ಪ್ರತಿಯೊಂದರಲ್ಲೂ ತಿಳಿದುಕೊಳ್ಳುವುದು ಇದ್ದೇ ಇರುತ್ತದೆ. ಮನಸ್ಸು ಇರಬೇಕಷ್ಟೆ. ಆದರೆ ಸಮಯ ಸಂದರ್ಭ ಇಲ್ಲದೇ ಸುಮ್ಮನೇ ಕೆಲವು ವಿಷಯಗಳ ಬಗ್ಗೆ ಅಗತ್ಯಕ್ಕಿಂತಲೂ ಜಾಸ್ತಿ ಕಾಲ ಮಾತಾಡುತ್ತಿದ್ದರೆ ಅದು ಕಾಡುಹರಟೆ, ನಿರುಪಯುಕ್ತ ಮಾತು ಅನಿಸಿಕೊಳ್ಳುತ್ತದೆ. ಅದನ್ನು avoid ಮಾಡಬೇಕು.
ಏನೇ ಆಗಲಿ ಒಬ್ಬೊಬ್ಬರ ಗುಣ ಒಂದೊಂದು ತರಹ. ನಿಮಗೆ ಹೀಗೆಲ್ಲಾ ಅನಿಸದಿದ್ದರೆ i am sorry. Irritate ಮಾಡ್ಕೋಬೇಡಿ :-)
ವಿ.ರಾ.ಹೆ.
:-) thanks for the comment.
ಚೈತ್ರಿಕ ಅವರೆ,
ಕೆಲವೊಮ್ಮೆ ನನಗೂ ಯಾಕೆ ಇಲ್ಲದ ಪ್ರಶ್ನೆ ಕೇಳುತ್ತಾರಪ್ಪ.. ಅನ್ನಿಸಿದ್ದಿದೆ. ಹಾಗನ್ನಿಸಲಿಕ್ಕೆ ಕಾರಣ ನಾವು ಅವರೆಲ್ಲರಿ೦ದ ದೂರ ಇದ್ದದ್ದು. ಅವರ ಬಗ್ಗೆ ಕೇಳಲು ನಮ್ಮ ಬಳಿ ಏನೂ ಇಲ್ಲ ಏಕೆ೦ದರೆ ಅವರ ಪರಿಚಯವೇ ನಮಗಿಲ್ಲ. ನಮ್ಮ ಹತ್ತಿರದ ನೆ೦ಟರು ಅವರಿಗೆ ಹತ್ತಿರದವರಾಗಿರುತ್ತಾರೆ.ಅವರ ಬಳಕೆಯೂ
ಇರುತ್ತದೆ. ಹಾಗಾಗಿ ನಾವು ಅವರಿಗೆ ಚೆನ್ನಾಗಿ ಪರಿಚಯದವರಾಗಿ ಬಿಟ್ಟಿರುತ್ತೇವೆ.ನಮ್ಮನ್ನು ನೋಡಿದೊಡನೆಯೆ ಅವರಿಗೆ ಮಾತನಾಡಬೇಕೆನಿಸುತ್ತದೆ. ಹಳ್ಳಿಗಳಲ್ಲಿ ಹಾಗೆ ಇರತ್ತೆ ಅಲ್ವಾ? ಬೇಗನೆ ಪರಿಚಯದಾರಾಗಿ ಬಿಡುತ್ತಾರೆ.ನಮ್ಮ ಬಗ್ಗೆ ಅವರಿಗೆ ತಿಳಿದನ೦ತರ ಮತ್ತೆ ಕೇಳುವುದಿಲ್ಲ.ನ೦ತರ ನಮಗೂ ಅವರೊಡನೆ ಮಾತನಾಡಬೇಕೆನಿಸುತ್ತದೆ. ಹಾಗಾಗಿ ಅವರೊಡನೆ ಚೆನ್ನಾಗಿ ಮಾತನಾಡಿದರೆ ನಿಧಾನವಾಗಿ ಅಭ್ಯಾಸವಾಗುತ್ತದೆ.ನ೦ತರ ಅಲ್ಲಿಯೂ ಸಹ ನಮಗೆ ತಿಳಿದುಕೊಳ್ಳಬೇಕಾದದ್ದು ಇದೆ ಅನ್ನಿಸತೊಡಗುತ್ತದೆ!
ಇರುವ ನಾಲ್ಕು ದಿನಗಳಲ್ಲಿ ಎಲ್ಲರೊಡನೆ ನಗುನಗುತ್ತಾ ಇದ್ದು ಬಿಡುವುದು.. ಅಲ್ವಾ?
ನೋಡಿ ಹವ್ಯಕರೂ ಅನ್ನಿಸಿದ ಕೂಡ್ಲೆ ನಾನು ಎಷ್ಟೊ೦ದು ಬರೆದು ಬಿಟ್ಟೆ!ನಾನೂ ಹವ್ಯಕಳಾಗಿದ್ದಕ್ಕೆ..
ಬೇಜಾರಿಲ್ಲ ತಾನೆ?
My new year resolution read every post of yours and improve my Kannada reading skill...
First of all you need to tell how to sit with a "blank" :) in these functions ?
Haan ! yeah about relative asking your whereabouts. Its called socializing, isn't it ? Man/woman is a social animal. Functions convert many of these animals to beasts. These social beasts bombard questions at anyone who smiles at them.
The best way to escape these beasts is to make a grumpy face and sit in one corner as if some has stuffed "avlakki" in your mouth.
Its a tried and tested solution. You wanna learn this trick ? "hana agatte" :)
ಚೈತ್ರಿಕಾರವರೇ, ಮೊದಲಿಗೆ ನಿಮ್ಮ ಬ್ಲಾಗಿಗೆ ಭೇಟಿ...
ಪಿ.ಜಿ. ಮತ್ತೆ ಅದರೊಡನೆ ಅಂಟಿಕೊಂಡ ಫಜೀತಿ ಬಗ್ಗೆ ಚನ್ನಾಗಿ ತಿಳಿಸಿದ್ದೀರಿ...
ನನ್ನ ಜಲನಯನಕ್ಕೂ ಒಮ್ಮೆ ಭೇಟಿ ನೀಡಿ..
www.jalanayana.blogspot.com
Post a Comment