Thursday, October 15, 2009

Customer care ಅನುಭವ

ಈಗಷ್ಟೇ Airtel prepaid customer care ಗೆ phone ಮಾಡಿದ್ದೆ. ಕೈ ತಪ್ಪಿ ಭಾಷೆ "ಕನ್ನಡ" ಎಂದು ಆರಿಸಿದೆ. Customer care executive ಎಷ್ಟು ಸ್ಫುಟವಾಗಿ, ಸುಂದರವಾಗಿ ಕನ್ನಡ ಮಾತನಾಡಿದಳೆಂದರೆ ಇಡಲು ಮನಸ್ಸೇ ಬರಲಿಲ್ಲ. ಇನ್ನೂ ಕೇಳುತ್ತಲೇ ಇರಬೇಕೆನ್ನಿಸಿತು. ನಿಜಕ್ಕೂ Wow!

5 comments:

ವಿ.ರಾ.ಹೆ. said...

ಕರ್ನಾಟಕದ ಕಸ್ಟಮರ್ ಕೇರ್ ನಲ್ಲಿ ಕನ್ನಡ ಮಾತಾಡಿದರು ಅಂದರೆ ಇಷ್ಟೆಲ್ಲಾ ಆಶ್ಚರ್ಯ ಪಡುವಂತಾದ್ದೇನಿದೆ! ಅದೂ ಕೈತಪ್ಪಿ ಕನ್ನಡ ಆರಿಸಿಕೊಂಡೆ ಅಂತೀರಲ್ಲ!!!

Chaithrika said...

ಹ ಹ್ಹ... ಕರ್ನಾಟಕದ ಯಾವ ಮೂಲೆಯಾದರೂ ಆಶ್ಚರ್ಯವಾಗುತ್ತಿರಲಿಲ್ಲ. ನಾನು ಬೆಂಗಳೂರಲ್ಲಿ ಇರುವ ಕಾರಣ ಆಶ್ಚರ್ಯವಾಗುತ್ತದೆ. ಇಂಗ್ಲಿಷ್ ಬಾರದವರೂ ಒದ್ದಾಡಿಕೊಂಡು ಮಾತನಾಡುವ, ನಾವು ಕನ್ನಡದಲ್ಲಿ ಉತ್ತರಿಸುತ್ತಿದ್ದರೂ ಇಂಗ್ಲಿಷ್ ಬಳಕೆ ನಿಲ್ಲಿಸದ ಕನ್ನಡಿಗ(?)ರಿರುವ ಈ ಊರಲ್ಲಿ ಕನ್ನಡ ಕೇಳಿ ಬಂದಾಗ ಸಂತೋಷ ಮತ್ತು ಅಚ್ಚರಿ.

ವಿ.ರಾ.ಹೆ. said...

ನಿಜ ನೀವು ಹೇಳೋದು. ಆದರೆ ನನಗಂತೂ ಇದುವರೆಗೆ ಬೆಂಗಳೂರಿನ ಎಲ್ಲಾ ಕಡೆ ಕನ್ನಡ ಆರಾಮಾಗಿ ನೆಡೆದಿದೆ. ಮೊದಲು ನಾವು ಶುರು ಮಾಡಬೇಕಷ್ಟೆ :)

ಕಸ್ಟಮರ್ ಕೇರ್ ಇಡೀ ರಾಜ್ಯಕ್ಕೆಲ್ಲ ಒಂದೇ ಇರತ್ತೆ . ಸರಿ, ಇನ್ಮೇಲೆ ಕೈತಪ್ಪಿ ಕನ್ನಡ ಆರಿಸಿಕೊಳ್ಳಬೇಡಿ, ಮನಸ್ಸಿನಿಂದ ಆರಿಸಿಕೊಳ್ಳಿ , ಬರೀ ಏರ್ಟೆಲ್ ಕಸ್ಟಮರ್ ಕೇರ್ ನಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆಯಲ್ಲೂ :)

Thanx

ವಸಂತ said...

ಚೆನ್ನಾಗಿ ಬರೆದಿದ್ದಿರಾ..

ಕನ್ನಡ ದಲ್ಲಿ ಎಲ್ಲ ಹಂತದ ಗ್ರಾಹಕ ಸೇವೆ ಸಿಗುವತ್ತ ಕೆಲಸ ಮಾಡುತ್ತಿರುವ ಈ ಗುಂಪಲ್ಲಿ ಸೇರಿ, ಇನ್ನಷ್ಟು ಬದಲಾವಣೆ ಮಾಡಿ:
http://groups.google.com/group/jaagruta_graahakaru?hl=kn

ಸಂಜಯ್ said...

idella swalpa jaasthi aytu ansutte kai tappi kannadada kade hogide antha bardirodu tumba bejaaraytu bidi>>>>>>>>>>>>>>>