Saturday, January 17, 2009

ದೂರುವ ಅರ್ಹತೆ ಇದೆಯೇ?

ಒ೦ದು ಸರಕಾರಿ ಕಛೇರಿ. ಹೆಸರು ಹೇಳಲಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದ್ದು. ಮೂರು ಬಾರಿ ಕರೆಯಿತು. ಅದು ಸರಿ ಇಲ್ಲ... ಇದು ಸರಿ ಇಲ್ಲ...clarifications...ಆ document ಕೊಡಿ... ಈ document ಕೊಡಿ... ಆಫೀಸಿಗೆ ರಜಾ ಹಾಕಿ ಹೋಗಬೇಕಾಯಿತು. ಎರಡು ಬಾರಿ ಸಂಬಂಧವಿಲ್ಲದ department ಗೆ... ಮತ್ತೊ೦ದು ಬಾರಿ ಬರಹೇಳಿದ ಆಫೀಸರು ರಜಾ.

ಕೊನೆಗೂ ಎಲ್ಲ settle ಆಗುವ ದಿನ ಬ೦ತು. ಏನೂ ಸಮಸ್ಯೆಗಳಿಲ್ಲ ಎ೦ಬುದನ್ನು ತಿಳಿಸಿದ ಪತ್ರ ಪಡೆಯಲು ಬರಹೇಳಿದ್ದರು. ತಕ್ಷಣ ಹೋದೆವು. ಆಫೀಸರು ಇನ್ನೇನು ಬರುತ್ತಾರೆ, 15 ನಿಮಿಷ ಕೂತಿರಿ ಎ೦ದರು. ಕೊನೆಗೆ ಸಹಿ ಹಾಕಿಸಿ ಪತ್ರ ಕೊಟ್ಟರು. ಅಷ್ಟೇ ಅಲ್ಲ... ಯಾವ ಸಂಕೋಚವೂ ಇಲ್ಲದೆ ದುಡ್ಡು ಕೊಡಬೇಕೆಂದರು.
ಎಷ್ಟು ಎಂದು ಕೇಳಿದರೆ ಮಾತಿಲ್ಲ! 10, 50, 100....? 200 ರೂಪಾಯಿ ಕೊಡಬೇಕಾಯಿತು. ಅಬ್ಬ! ಮುಗಿಯಿತು ಎ೦ದು ಪತ್ರ ನೋಡಿದರೆ, ನಮಗೆ ಬರಬೇಕಿದ್ದ 1500 ರೂಪಾಯಿ ಕೊಡಲ್ಪಟ್ಟಿದೆ ಎ೦ದಿದೆ! ಅದರ ಬಗ್ಗೆ ಕೇಳಿದಾಗ internet ಮೂಲಕ ನವಂಬರದಲ್ಲಿ Bank ಗೆ ಕಳಿಸಿರುವುದಾಗಿ ಹೇಳಿದರು.

ಮರಳಿ ಏನೋ ಬಂದಾಯಿತು. Bank ನಲ್ಲಿ ನೋಡಿದರೆ ಹಣವೇ ಬಂದಿಲ್ಲ! ನಮ್ಮದೇ ಹಣ, ನಮ್ಮ ತಪ್ಪಿಲ್ಲದಿದ್ದರೂ ನಮಗೆ ಬಂದಿಲ್ಲ! ಅದರ ಮೇಲೆ 200 ರೂಪಾಯಿ ನಷ್ಟ ಬೇರೆ. ಆಪ್ತರಲ್ಲಿ ಹೇಳಿಕೊಳ್ಳುವ ಎಂದು ಫೋನಾಯಿಸಿದೆ. "ತೊಂದರೆ ತಪ್ಪಿತಲ್ಲ ಎಂದು ಸುಮ್ಮನಿದ್ದು ಬಿಡಿ. ಇದು ಬಲು ಉಪದ್ರವಕಾರಿ ಕೆಲಸ, ಇದರ ತಂಟೆಗೆ ಹೋಗದಿರುವುದೇ ಒಳ್ಳೆಯದು" ಎಂದರು.

ಬಹಳ ಬೇಸರವಾಯಿತು. 4 working days waste ಮಾಡಿ ಏನೂ ಉಪಯೋಗವಾಗಲಿಲ್ಲ. ದುಡ್ಡು ಕೊಡದೆ ಹೋಗಿದ್ದರೆ ಇನ್ನೆಷ್ಟು ದಿನ waste ಆಗುತ್ತಿತ್ತೋ? ದೇಶ, ಭ್ರಷ್ಟಾಚಾರ ಎಂದೆಲ್ಲ ಕೂಗಾಡುತ್ತೇವೆ, ನಾವೂ ಮಾಡಿದ್ದೇನು? ಅದೇ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸಿದ್ದು. ಯಾರನ್ನು ದೂರುವುದು? ವಿರೋಧಿಸುತ್ತ ಕೂರಲು ನಮಗೆ ಸಮಯವೆಲ್ಲಿದೆ? ಇದನ್ನು ಬಳಸಿಕೊಂಡು ಹಣ ತಿನ್ನತ್ತಾರೆ. ಅದಕ್ಕೆ ಸರಿಯಾಗಿ ನಾವೂ ಕೊಡುತ್ತೇವೆ. ನೆನೆಸಿಕೊಂಡು ನನ್ನ ಮೇಲೆಯೇ ಸಿಟ್ಟು ಬಂತು. ತಲೆ ಕೆಟ್ಟಂತಾಯಿತು.

ಚಿಕ್ಕಂದಿನಿಂದ ಏನನ್ನು ತಪ್ಪೆಂದು ಹೇಳಿಸಿಕೊಂಡು ಬಂದಿದ್ದೆವೋ, ಇಂದು ಅದೇ ಸರಿಯಾದ (ಸುಲಭವಾದದ್ದರಿಂದ) ಮಾರ್ಗ ಎಂದು ಹೇಳಿಸಿಕೊಳ್ಳುತ್ತಿದ್ದೇವೆ. ಮನಸಿಗೆ ಇದನ್ನು ಒಪ್ಪಿಕೊಳ್ಳಲಾಗದೆ ದುಃಖವಾಯಿತು. ಯಾಕೆ ಕಲಿಸಬೇಕು ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸ, ಮುಂದೆ ಸುಲಭ ಮಾರ್ಗವನ್ನೇ ಅನುಸರಿಸುವುದಾದರೆ? ಗೆಳತಿಗೆ ಫೋನ್ ಮಾಡಿದೆ. stipend ಸಿಗುವುದೆಂಬ ಭರವಸೆಯಲ್ಲಿ Higher Studies ಮಾಡಹೊರಟವಳು ಆಕೆ. ಕೊನೆಯ semester ತಲುಪಿದರೂ ಒಮ್ಮೆಯೂ ಬರಲಿಲ್ಲ stipend. ಸಂಬಂಧಪಟ್ಟ ಎಲ್ಲರಲ್ಲೂ ವಿಚಾರಿಸಿದ್ದಾಳೆ. ಎಲ್ಲರೂ ಇನ್ನೊಬ್ಬರ ತಲೆ ಮೇಲೆ ದೂರು ಹಾಕಿ ಸುಮ್ಮನಾಗಿದ್ದಾರೆ. ಅವಳಂತೆ stipend ಸಿಗದ ಇತರರು ವಿಚಾರಿಸುವ ಧೈರ್ಯವಿಲ್ಲದೆ ಸುಮ್ಮನಿದ್ದಾರೆ.

ಅವಳೊಡನೆ ಹರಟಿದೆ. ಸರಕಾರಿ ಕಛೇರಿಗಳಲ್ಲಿ ಕೊಡಬೇಕಾದ ಲಂಚದ chart ಹಾಕುವುದು ಒಳ್ಳೆಯದು;
letter ಪಡೆಯಲು.... ರೂ. 50
ಒಂದು ಮೇಜಿನಿಂದ ಇನ್ನೊಂದು ಮೇಜಿಗೆ file ವರ್ಗಾಯಿಸಲು.... ರೂ. 100
ಅಧಿಕಾರಿಗಳ ಸಹಿ ಪಡೆಯಲು.... ರೂ. 200 ....
ಹೀಗಿದ್ದರೆ ಸ್ವಲ್ಪವಾದರೂ ಒಳ್ಳೆಯದಾದೀತು... Black money, white ಆಗದಿದ್ದರೂ at least, grey ಆದೀತು ಎಂದು ಅಸಹಾಯಕತೆಯನ್ನು ಹಳಿದುಕೊಳ್ಳುತ್ತಲೇ ನಕ್ಕೆವು.

4 comments:

Anonymous said...

ಒಮ್ಮೆ ಟ್ರಾಫಿಕ್ ಪೋಲೀಸ್ ಸಹ ಹೇಳಿದ್ದ, ನಮಗೆ ಐನೂರು ಕೊಡಿ, ಇಲ್ಲದಿದ್ದರೆ ಕೋರ್ಟಿಗೆ ಹೋಗಿ ಸಾವಿರ ಕಟ್ಟಬೇಕಾಗುತ್ತದೆ ಎಂದು. ಇದು ತಪ್ಪು ಎನ್ನಿಸಿದರೂ ಕೋರ್ಟಿಗೆ ಹೋಗುವ ಸಮಯವನ್ನೂ ಅದರ ಕಿರಿಕಿರಿಯನ್ನೂ ಗಮನಿಸಿದಾಗ ಇದೇ ಸರಿ ಅನ್ನಿಸಿತು.
ಕಾಲದೊಡನೆ ಮೌಲ್ಯಗಳೂ ಬದಲಾಗುತ್ತಿವೆ,ಹಣ ಮಾತ್ರ ಮೌಲ್ಯವನ್ನು ಪಡೆದುಕೊಳ್ಳುತ್ತಿದೆ..

shivu.k said...

ಚೈತ್ರಿಕಾ ಮೇಡಮ್,

ಲೇಖನ ತುಂಬಾ ಇಷ್ಟವಾಯಿತು....ಲಂಚದ ಬಾಹುಗಳು ಆವರಿಸಿರದ ಸ್ಥಳವೇ ಇಲ್ಲವೆನಿಸುತ್ತದೆ...ಅದರಲ್ಲೂ ಸರಕಾರಿ ಕಛೇರಿಗಳಂತೂ....ಕೇಳುವುದೇ ಬೇಡ.....ಅದಕ್ಕೆ ಅವ್ರಿಗೆ ನಿವೃತ್ತಿ ವೇಳೆಗೆ ಮೈತುಂಬಾ ಕಾಯಿಲೆಗಳಿರುತ್ತವೆ...[ಇದು ಶಾಪ ಅಂದುಕೊಳ್ಳೀ.]

ಹಾಗೆ ಹಾರಾಡುತ್ತಾ ನಿಮ್ಮ ಬ್ಲಾಗಿಗೆ ಬಂದೆ....ಆಪ್ತವಾಗಿ ಬರೆಯುತ್ತೀರಿ...ಅನ್ನಿಸುತ್ತೆ....ಉಳಿದ ಬರಹಗಳನ್ನು ನಿದಾನವಾಗಿ ಓದುತ್ತೇನೆ....ನೀವು ನನ್ನ ಬ್ಲಾಗಿನ ಕಡೆಗೊಮ್ಮೆ ಬನ್ನಿ....ಅಲ್ಲಿ ನಿಮಗಿಷ್ಟವಾಗುವ ಫೋಟೊ ಮತ್ತು ಲೇಖನಗಳಿರಬಹುದು....
ಆಹಾಂ! ನನ್ನ ಹೊಸ ಲೇಖನ, ನಡೆದಾಡುವ ಭೂಪಟ ನೋಡಲು ಬನ್ನಿ...ಮನಃಪೂರ್ವಕವಾಗಿ ನಗಬಹುದು....
http://chaayakannadi.blogspot.com/

sunaath said...

ಚೈತ್ರಿಕಾ,
ಇಂತಹ ಪ್ರಸಂಗಗಳನ್ನು ನಾನೂ ಅನುಭವಿಸಿದ್ದೇನೆ.
ನಿಮಗೆ ಸಹಯಾತ್ರಿಕನಾಗಿ ಸಮಾಧಾನ ಹೇಳಬಯಸುತ್ತೇನೆ.

rukminimalanisarga.blogspot.com said...

ಆದಷ್ಟು ದುಡ್ದುಕೊಡದೆ ನಮ್ಮ ಕೆಲಸ ಮಾಡಲು ನೋಡಬೇಕು. ಅನಿವಾರ್ಯ ಎಂದಾದಗ ಕೊಡದೆ ಬೇರೆ ದಾರಿಯಿಲ್ಲ ಅಂದರೆ ಮನ ಒಪ್ಪದಿದ್ದರು ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇವೆ.