Monday, October 13, 2008

ಏನೆನ್ನಬೇಕು ಇದಕ್ಕೆ?

ನಮಸ್ಕಾರ.
ಬಹು ದಿನಗಳ ನ೦ತರ blog ಪ್ರವೇಶ. ಮು೦ದಿನ ತಿ೦ಗಳು ಕನ್ನಡ ರಾಜ್ಯೋತ್ಸವ. ನಾನು blog ಆರ೦ಭಿಸಿ 1 ವರ್ಷ ಆಗುತ್ತದೆ. ಅ೦ದು ನನ್ನ blog ವರ್ಷ ನ೦ತರ ಹೇಗಿರಬೇಕೆ೦ದು ಅ೦ದುಕೊ೦ಡಿದ್ದೆನೋ ಅದರ ಕಾಲ೦ಶವೂ ಬರೆದಿಲ್ಲ!
ಇರಲಿ. ರಾಜ್ಯೋತ್ಸವದ ಬಗ್ಗೆ ಹೇಳುತ್ತಿದ್ದೆ. ಮೊನ್ನೆ office ನಲ್ಲಿ ತೆಲುಗು ಮಾತನಾಡುವವರಿಬ್ಬರು, ತೆಲುಗು ಬಲ್ಲ ಕರ್ನಾಟಕದವಳೊಬ್ಬಳು ಊಟ ಮಾಡುತ್ತಿದ್ದರು. ಅವರೊಡನೆ ನಾನೂ ಊಟಕ್ಕೆ ಕೂತೆ.
ಅವರು ಮಾತಾಡತೊಡಗಿದರು..... "In Bangalore, people celebrate Ganesh chathurthi whenever they wish....." (ಉಳಿದಿಬ್ಬರು "ಹಹ್ಹಹಾ" ಎ೦ದು ನಕ್ಕರು). "Some people install Ganesh idol in the house after 1 month from the actual date of Chauthi....." (ಪುನಃ "ಹಹ್ಹಹಾ"). "Also Kannada rajyothsava is celebrated year-round....." (ಮತ್ತೆ "ಹಹ್ಹಹಾ"). ನನಗೆ ಆಗಲೇ ಸಿಟ್ಟು ಬರಹತ್ತಿತ್ತು. ನಗು ಬರಲಿಲ್ಲ. ನನ್ನಲ್ಲಿ ಕೇಳಿದರು "Don't you know?"
ನಾನು ಹೇಳಿದೆ... ನನಗೆ ಇ೦ಥದು ಯಾವುದೂ ತಿಳಿದಿಲ್ಲ. ಈವರೆಗೆ ಯಾವ ಊರಲ್ಲೂ ಕೇಳಿಲ್ಲ. ಬೆ೦ಗಳೂರಿನ ಬಗ್ಗೆ ಮಾತ್ರ ನಾನು ಹೇಳಲಾರೆ. ಇಲ್ಲಿ ಅನೇಕ ಕಡೆಗಳ ಜನರಿರುವುದರಿ೦ದ ಮಿಶ್ರ ಸ೦ಸ್ಕೃತಿ ಇರಬೇಕು. ಆದ್ದರಿ೦ದಲೇ ಹೀಗೆಲ್ಲ ವಿಚಿತ್ರಗಳಿರಬೇಕು.
ಅವರು ಸುಮ್ಮನಾದರು. ನನ್ನ ಊಟ ಮುಗಿಯಿತು. ನಾನು ಹೊರಡಲನುವಾದೆ. ಅಷ್ಟರಲ್ಲಿ ಒಬ್ಬ ಹೇಳಿದ. "Rjyothsava is celebrated on the day Karnataka was formed." ಕರ್ನಾಟಕದ ಹುಡುಗಿ ಸುಮ್ಮನೆ ನೋಡುತ್ತಿದ್ದಳು. "It was Kempegowda who built Karnataka on Rajyothsava day, Right?" ಎ೦ದ ಆತ. ಕರ್ನಾಟಕದ ಹುಡುಗಿ, ಕರ್ನಾಟಕದವರಾಗಿಯೂ ತಮಗೆ ಏನೂ ತಿಳಿದಿಲ್ಲ; You know better than us" ಎ೦ದಳು.
ನಾನು ಬೇಗನೆ ಕಾಲುಕಿತ್ತೆ.

2 comments:

Rahul said...

ಅಂದ್ ಹಾಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ ಮೇಲೆ ಅವರುಗಳ ಪ್ರತಿಕ್ರಿಯೆ ಹೇಗಿತ್ತು? ಅದರ ಬಗ್ಗೆನೂ ಬರೀರಲ್ಲ ಮತ್ತೆ.

ವಿ.ರಾ.ಹೆ. said...

ನಮಸ್ತೆ, ಕಾಲ್ಕೀಳೋ ಬದ್ಲು ಸರಿಯಾದ ವಿಷಯ ಸಮಾಧನವಾಗಿ ತಿಳಿಸಿಕೊಟ್ಟಿದ್ರೆ ಆಗ್ತಿತ್ತಲ್ವಾ :)