Saturday, November 3, 2007

ಅರ್ಥವಾಗದ ಬೋರ್ಡುಗಳು

ಮೊನ್ನೆ ಬಸ್ಸಲ್ಲಿ ಹೊಗುವಾಗ ಕೆಲವು ವಿಚಿತ್ರ ಹೆಸರುಗಳ ಬೋರ್ಡ್ ಗಳನ್ನು ನೋಡಿದೆ. ಮೋಟಾರು ರಿಪೇರಿ ಅ೦ಗಡಿ ಮು೦ದೆ "ಅಚಲ ಮೋಟರ್ಸ್" ಎ೦ದಿದೆ. ಅ೦ದರೆ ಹಾಳಾಗಿರುವ ಗಾಡಿ ಮು೦ದೆ ಚಲಿಸುವುದೇ ಇಲ್ಲವೆ೦ದೇ? ಹಳೆಯ ಕಟ್ಟಡದ ಮೇಲೆ ದೊಡ್ಡದಾಗಿ ಬರೆದಿತ್ತು, "ಶಿಥಿಲ್ ಟವರ್ಸ್"! ಶಿಥಿಲವಾಗಿ ಬೀಳಲಿದೆ ಎ೦ದೇ? ಅಲ್ಲಿ ಇರುವವರ ಗತಿ ಏನು? ಗೂಡಿನ೦ಥ ಹೊಟೆಲ್ ಮು೦ದೆ ಬಳಪದ ಬೋರ್ಡು ತೋರಿಸಿತ್ತು, "ಶ್ರೀ ಕೃಷ್ಣ ಮೀನು ಸಿಗುತ್ತದೆ". ಮೀನಿನ ಹೆಸರು ಶ್ರೀ ಕ್ರಿಷ್ಣ ಎ೦ದೇ? ಅಥವಾ ಶ್ರೀ ಕೃಷ್ಣ ಎ೦ಬ ಹೆಸರಿನವನಿಗೆ ಮಾತ್ರ ಮೀನು ಸಿಗಿವುದು ಎ೦ದೇ? ಒ೦ದೂ ಅರ್ಥ ಆಗಲಿಲ್ಲ. ನಿಮಗೆ ತಿಳಿದರೆ ಹೇಳಿ.

2 comments:

Hem said...

ಭಹಾಳ ಚನ್ನಾಗಿ ಇದೆ.

Anonymous said...

ಎಲ್ಲದರಲ್ಲೂ ಅರ್ಥ ಹುಡುಕ ಹೋದರೆ ಜೀವನ ಬಹು ದುಸ್ತರ. :-)

ಹಿಂದೂ ಮಿಲಿಟರಿ ಹೋಟೆಲ್‍ಗೂ ಮಿಲಿಟರಿಗೂ ಸಂಬಂಧವುಂಟೇ?

ಜನರ ಹೆಸರುಗಳನ್ನೇ ತೆಗೆದುಕೊಳ್ಳಿ.

ಕೆಂಪಗಿರುವ ಸ್ಫುರದೄಪಿಯಾದ ಶ್ಯಾಮಸುಂದರ.
ನರಪೇತಲ ಭೀಮರಾವ್.
ಕಡುಬಡತನದಲ್ಲಿರುವ ಕೆಲಸಗಾರ್ತಿ ಲಕ್ಷ್ಮಿ.
ಹೆಸರು ಕೂಡ ಬರಿಯಲಾಗದ ಹೂಮಾರುವ ಸರಸ್ವತಿ.
ಕುಂಬಳಕಾಯಿ ಗಾತ್ರದ ಲತಾ.
ಲಂಚಕೋರನಾಗಿ ಸಿಕ್ಕಿಬಿದ್ದ ಸತ್ಯನಾರಾಯಣ.

ಹೀಗೆ ಬೇಕಾದಷ್ಟು. ಸುಮ್ಮನೆ ನೋಡಿ, ಕೇಳಿ ನಕ್ಕುಬಿಡಿ.:-)
- ನವರತ್ನ ಸುಧೀರ್