Thursday, October 7, 2010

ನಾನು

ಈ ಬ್ಲಾಗು ಆರಂಭಿಸಿದಾಗ ನಾನು ಅನಾಮಿಕಳಾಗಿರಬೇಕೆಂದು ಬಯಸಿದ್ದೆ. ನನ್ನ ಬರಹಗಳಿಗೆ ಪ್ರತಿಕ್ರಿಯೆ ಬರೆಯುವವರು ನನ್ನ ಪರಿಚಿತರಾಗಿದ್ದರೆ ಪ್ರತಿಕ್ರಿಯೆ ಬೇರೆ ರೀತಿ ಇದ್ದೀತು ಎಂದು ಯೋಚಿಸಿದ್ದೆ. ನನ್ನ ಸಂಬಂಧಿಗಳಿಗೆ ನನ್ನ ಬರಹಗಳನ್ನು ಓದುವ ಅವಕಾಶವಿದ್ದರೆ ನಾನು ಬರಹಗಳಲ್ಲಿ ಜಾಗರೂಕತೆಯಿಂದ ವರ್ತಿಸಬೇಕಾದೀತೆಂದು ಹೆದರಿದ್ದೆ.
ಬ್ಲಾಗಿಗೆ ಮೂರು ವರುಷ ತುಂಬುವುದಕ್ಕೆ ಬಂದಿದೆ. ಈಗ ಅನೇಕ ಸಂಬಂಧಿಕರು, ಮಿತ್ರರು, ಪರಿಚಿತರು ಇದನ್ನು ಓದುತ್ತಾರೆ. ಜೊತೆಗೆ ಪರಿಚಿತರಲ್ಲದವರೂ ಓದಿ ಪ್ರತಿಕ್ರಿಯೆ ಬರೆದು ಪರಿಚಿತರಾಗಿದ್ದಾರೆ. ಬ್ಲಾಗು ನನ್ನದೆಂದು ಗೊತ್ತಾದ ಮೇಲೂ ಓದಲು ಆಸಕ್ತಿ ತೋರಿಸದ ಕೆಲ ಬಂಧುಗಳು ಇದ್ದಾರೆ. ಇಷ್ಟು ಸಮಯದ ನಂತರ ನಾನು ಅನಾಮಿಕಳಾಗಿರುವ ಬಯಕೆ ಅರ್ಥಹೀನವೆನಿಸುತ್ತದೆ.
ಹಾಗಾಗಿ ನನ್ನ ನಿಜ ಹೆಸರು ಹಾಕುತ್ತಿದ್ದೇನೆ. ನನ್ನ ಹೆಸರು ಸಿಂಧೂ. ಇತಿಹಾಸದಲ್ಲಿ ಅತ್ಯಂತ ಆಸಕ್ತಿ ಇರುವ ನನ್ನ ತಂದೆಯವರು ಪ್ರೀತಿಯಿಂದ ಆರಿಸಿದ ಹೆಸರು. ಹಾಗಾದರೆ ಚೈತ್ರಿಕಾ ಎಂಬ ಹೆಸರು ಎಲ್ಲಿಂದ ಸಿಕ್ಕಿತೆಂದು ಆಶ್ಚರ್ಯವೇ? ಅದೂ ನನ್ನದೇ ಹೆಸರು. ನನಗೆ ಇಡದ ಹೆಸರು. ಪೂಜೆ, ದೇವರ ಸಮಾರಂಭಗಳನ್ನು ನಡೆಸಿಕೊಡುವ ಭಟ್ಟರು ಸೂಚಿಸಿದ ಹೆಸರು ಅದು. ನನಗೆ ಚೈತ್ರಿಕಾಳಾಗಿಯೇ ಬ್ಲಾಗಿನಲ್ಲಿರಬೇಕೆಂಬ ಆಸೆಯಾದರೂ ನಿಜ ಹೆಸರು ಕಳೆದುಹೋದರೆ ಎಂದು ಒಮ್ಮೊಮ್ಮೆ ಅನಿಸಿದ್ದಕ್ಕೆ ಇಲ್ಲಿ ಬರೆದಿದ್ದೇನೆ. ನನ್ನ ಹೆಸರು ಏನೇ ಆದರೂ ಓದುವವರಿಗೆ ಅದು ಮುಖ್ಯವಲ್ಲ ಎಂದೂ ಭಾವಿಸಿದ್ದೇನೆ.
-

7 comments:

ವಿ.ರಾ.ಹೆ. said...

:-) :-)

ಸಾಗರದಾಚೆಯ ಇಂಚರ said...

ಸಿಂಧು
ನಿಮ್ಮ ಬರಹಗಳು ಮುಕ್ಯವೇ ಹೊರತು ಹೆಸರಲ್ಲ

ಆದರೆ ಕೆಲವೊಮ್ಮೆ ಹೆಸರು ವ್ಯಕ್ತಿತ್ವಕ್ಕೆ ಶೋಭೆ
ಬರೆಯುತ್ತಿರಿ

ಅನಂತರಾಜ್ said...

ಅನಾಮಿಕರಾಗಿ ಉಳಿಯದ ಚೈತ್ರಿಕಾ ಅವರೆ..ಅಮೂಲ್ಯವಾದ ಸಿ೦ಧೂ ಎ೦ಬ ಹೆಸರೂ ಕೂಡ ಇಟ್ಟುಕೊ೦ಡಿದ್ದೀರಿ. ಹೆಸರಿನಲ್ಲೇನಿದೆ? ನಿಜ...ಆದರೂ ವ್ಯಕ್ತಿತ್ವಕ್ಕೆ ವ್ಯಕ್ತಿಯ ನಾಮಧೇಯವೂ ಅತಿ ಮುಖ್ಯ.. ಅಲ್ಲವೆ? ನಿಮ್ಮ ತಾಣಕ್ಕೆ ನನ್ನ ಮೊದಲ ಭೇಟಿ. ಶುಬಾಶಯಗಳು.

ಅನ೦ತ್

mala said...

ನಿಜ ನಾಮಧೇಯಲ್ಲಿ ಮುಂದೆ ಲೇಖನಗಳು ಬರುತ್ತಿರಲಿ.

Akshara Damle said...

Akka, I was thinking who is this Chithrika when you had put comments on my writings. Though I had read a few articles, I was not that much interested to put my comments as it was an unknown blogger. Now U did a good job. Because, there is an extra interest in reading writings of known person than an unknown one.. :) :)

Yours
Akshu

ಮನಸ್ವಿ said...

ಬ್ಲಾಗ್ ಲೋಕವೇ ಹಾಗೇ.. ಇಲ್ಲಿ ಬ್ಲಾಗ್ ಗಾಗಿಯೇ ಬೇರೆ ಹೆಸರು ಇಟ್ಟುಕೊಳ್ಳುವ ಸಂಪ್ರದಾಯ ಮುಂಚೆಯಿಂದಲೂ ಇದೆ.. ನಿಜವಾದ ಹೆಸರನ್ನು ಹೇಳಲು ಇಚ್ಚಿಸದವರು ಅನೇಕರು ಇದ್ದಾರೆ, ನಿಜವಾದ ಹೆಸರಿನಲ್ಲಿ ಬರೆಯುವವರಿಗೂ ಕಡಿಮೆಯೇನಿಲ್ಲ...

ನಿಜವಾದ ಹೆಸರಿನಲ್ಲಿ ಅಥವಾ ಬ್ಲಾಗ್ ಗಾಗಿ ಇಟ್ಟುಕೊಂಡ ಹೆಸರಾದರು ಸಂಬಂಧಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತೀರಿ? ನಿಮಗನ್ನಿಸಿದ್ದನು ಬರೆಯುವ ಸ್ವಾತಂತ್ರ್ಯ ನಿಮಗಿದೆ. ಒಳ್ಳೋಳ್ಳೆ ಲೇಖನಗಳನ್ನು ಬರೆಯುತ್ತಿರಿ

ಅಂದಹಾಗೆ ನನ್ನ ಹೆಂಡತಿಯ ಹೆಸರು ಚೈತ್ರಿಕಾ...
ಚೈತ್ರ ಎನ್ನುವ ಹೆಸರು ಅನೇಕ ಆದರೆ ಚೈತ್ರಿಕಾ ಎನ್ನುವ ಹೆಸರು ಅಪರೂಪ.

Ganesh Bhat said...

waav,super