Wednesday, February 17, 2010

Water colour painting ನನ್ನ ನೆಚ್ಚಿನ ಹವ್ಯಾಸ. ಆದರೆ ಅದನ್ನು ಮಾಡದೆ ವರ್ಷವೇ ಆಯಿತು.
ಬೆಂಗಳೂರಿಗೆ ಬಂದು ಎರಡು ವರ್ಷವಾಗಲು ಬಂತು. ಕೇವಲ ಒಂದೇ painting ಮಾಡಿದ್ದೇನೆ. ಆದರೆ ಅದು ಹಾಳೆಯ ಗುಣದಿಂದಾಗಿ ಬಣ್ಣ ಹಚ್ಚುವಾಗ ಸಿಪ್ಪೆ ಎದ್ದು ಬಹಳ ದುಃಖವಾಯಿತು. ಬಿಟ್ಟು ಹೋದ ಹವ್ಯಾಸವನ್ನು ಪುನಃ ಮುಂದುವರಿಸುವಾಸೆ. ಈ ವರ್ಷ ಕನಿಷ್ಟ ಮೂರಾದರೂ painting ಮಾಡಬೇಕೆಂದುಕೊಂಡಿದ್ದೇನೆ. ನನಗೊಂದು ಪ್ರಶ್ನೆಯಿದೆ. ಬ್ಲಾಗ್ ನಲ್ಲಿ ಹಾಕಿದರೆ ಉತ್ತರ ಬಂದೀತೆಂದು ಭಾವಿಸಿದ್ದೇನೆ.
ಅದಕ್ಕಿಂತ ಮೊದಲು ಕಳೆದ ವರ್ಷ ಮಾಡಿದ painting ನ ಫೋಟೊ:



Water colour painting ಮಾಡಲು ಹಾಳೆಗಳು ಬೇಕು. ಬಣ್ಣವನ್ನು wash ಮಾಡಿದರೆ ಹಾಳೆಯ ಸಿಪ್ಪೆ ಏಳಬಾರದು. ಎಂಥ ಹಾಳೆ ಉಪಯೋಗಿಸಬೇಕು? ಮತ್ತು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಅದನ್ನು ಪಡೆಯಬಹುದು? ಗೊತ್ತಿದ್ದರೆ ದಯವಿಟ್ಟು ಹೇಳಿ.

15 comments:

shivu.k said...

ಚೈತ್ರಿಕಾ,

ನೀವು ತುಂಬಾ ಚೆನ್ನಾಗಿ ಪೈಂಟಿಂಗ್ ಮಾಡುತ್ತೀರಿ ಅನ್ನುವುದು ನಿಮ್ಮ ಚಿತ್ರ ನೋಡಿದಾಗಲೇ ಗೊತ್ತಾಗುತ್ತದೆ. ಅದನ್ನು ಮುಂದುವರಿಸಿ. ನನಗೆ ಎಲ್ಲಾ ಪ್ರಕಾರದ ಕಲೆಗಳನ್ನು ನೋಡಿ ಆನಂದಿಸುತ್ತೇನೆ. ಮುಂದುವರಿಸಿ..all the best.

ಸಾಗರದಾಚೆಯ ಇಂಚರ said...

ಚೈತ್ರಿಕಾ
ನಿಮ್ಮ ಪೇಂಟಿಂಗ್ ತುಂಬಾನೇ ಚೆನ್ನಾಗಿದೆ
೨-೩ ಪೇಂಟಿಂಗ್ ಮಾಡಿ ಫೋಟೋ ಫ್ರಮೆ ಮಾಡಿಸಿಡಿ
ಖಂಡಿತ ಮುಂದೊಂದು ದಿನ ಪ್ರದರ್ಶನ ಮಾಡಬಹುದು
ನಿಮ್ಮ ಕಲೆಗೆ ಅಭಿನಂದನೆ

Dileep Hegde said...

ಚೈತ್ರಿಕ,
Water color ಪೇಂಟಿಂಗ್ ನಿಜಕ್ಕೂ ಉತ್ತಮವಾದ ಹವ್ಯಾಸ..

ನೀವು ಪೋಸ್ಟ್ ಮಾಡಿರುವ ಚಿತ್ರ ತುಂಬಾ ಚೆನ್ನಾಗಿದೆ.. ಹವ್ಯಾಸ ಹೀಗೇ ಮುಂದುವರೆಯಲಿ... ನೀವಂದುಕೊಂಡಂತೆ, ಬರೇ ಮೂರಲ್ಲ.. ನೂರು ಚಿತ್ರಗಳು ನಿಮ್ಮ ಕುಂಚದಿಂದ ಮೂಡಿಬರಲಿ...

ಮತ್ತೆ ನಿಮ್ಮ ಪ್ರಶ್ನೆಗೆ ಉತ್ತರ.. Water color ಪೇಂಟಿಂಗ್ ಗೆ ಅಂತಾನೆ ಹ್ಯಾಂಡ್ ಮೇಡ್ ಪೇಪರ್ ಗಳು ಸಿಗುತ್ತವೆ.. ಈ ಪೇಪರ್ ಗಳ surface ಸ್ವಲ್ಪ rough ಆಗಿರುತ್ತದೆ... ನಿಮ್ಮ ಸನಿಹದ ಯಾವುದೇ stationary ಅಂಗಡಿಯಲ್ಲಿ ಕೇಳಿನೋಡಿ.. ಸಿಗಲಿಲ್ಲ ಅಂತಾದ್ರೆ avenue ರೋಡ್ ನಲ್ಲಿರುವ ರಾಜಾ ಮಾರ್ಕೆಟ್ ಗೆ ಒಮ್ಮೆ ಭೇಟಿ ಕೊಡಿ.. ನಿಮಗೆ ಅಗತ್ಯವಿರುವ ಎಲ್ಲ ಚಿತ್ರ ಕಲೆಗೆ ಸಂಬಂದಿಸಿದ ಪರಿಕರಗಳು ಇಲ್ಲಿ ಲಭ್ಯ... All the best..!!

Chaithrika said...

ಮೆಚ್ಚುಗೆಗೆ ಎಲ್ಲರಿಗೂ ಧನ್ಯವಾದ. ತುಂಬಾ ಖುಷಿಯಾಯಿತು. ದಿಲೀಪ್ ಹೆಗ್ಡೆಯವರೇ ಒಳ್ಳೆಯ information ನೀಡಿದ್ದೀರಿ.

Jagali bhaagavata said...

Chaithrika,

Check with Pramod in this blog site - http://www.kuncha-prapancha.blogspot.com/

He is enthusiastic artist. He should be able to help you out if you have any related questions.

Pramod P T said...

ಹಾಯ್ ಚೈತ್ರಿಕಾ,

ವರ್ಷಕ್ಕೆ "ಮೂರು" ಪೇಂಟಿಂಗ್ಸ್ ತುಂಬಾ ಕಡಿಮೆ ಆಯಿತು. atleast ತಿಂಗಳಿಗೊಂದು ಅಂತಾದ್ರು ಇರಲಿ :).

ಇನ್ನು ಪೇಪರ್ ವಿಷಯಕ್ಕೆ ಬಂದರೆ,
೧. "ಹ್ಯಾಂಡ್ ಮೇಡ್" ಪೇಪರ್ಸ್ ಸೂಕ್ತ water colour ಪೇಂಟಿಂಗ್ಸ್ ಗೆ. (different type texture on paper surface. you can feel it)
೨. ದಿಲೀಪ್ ಹೇಳಿದ ಹಾಗೆ avenue ರೋಡ್ ನಲ್ಲಿ ಟ್ರೈ ಮಾಡಿ.
೩. ಅವೆನ್ಯೂ ರಸ್ತೆ ಯಲ್ಲಿ "ಭಾಸ್ಕರ್ ಆರ್ಟ್ಸ್" ಅಂಗಡಿ ಗೆ ಭೇಟಿ ಕೊಡಿ. ಅಲ್ಲಿ ಕೇವಲ ಪೇಪರ್ ಅಲ್ಲದೆ ಎಲ್ಲಾ ರೀತಿಯ ಆರ್ಟ್ materials ಸಿಗುತ್ತವೆ. ಹೊರಗಿನಿಂದ ನೋಡಿದರೆ ಅದು ತುಂಬಾ ಚಿಕ್ಕ ಅಂಗಡಿ. ಹ್ಯಾಂಡ್ ಮೇಡ್ ಪೇಪರ್ ಗಾಗಿಯೇ separate section ಇದೆ.
೪.water colour painting ಮಾಡೊವಾಗ, ಅಗತ್ಯಕ್ಕಿಂತ ಜಾಸ್ತಿ ನೀರನ್ನ ಬಳಸಿ ಪೇಪರ್ ಮೇಲೆ brush ನಿಂದ ಉಜ್ಜಬೇಡಿ(!).

ಪ್ರಮೋದ್

Chaithrika said...

ಸಲಹೆಗಳಿಗೆ ಬಹಳ ಧನ್ಯವಾದಗಳು. ನನಗೆ ಗೊತ್ತೇ ಇರಲಿಲ್ಲ, ನನ್ನ ಬ್ಲಾಗ್ ಗೆ ಇಷ್ಟು ಜನ ಬರುತ್ತಾರೆಂದು! ಬರೆಯುವ ಹುಮ್ಮಸ್ಸು ಹೆಚ್ಚುತ್ತಿದೆ.

rukminimalanisarga.blogspot.com said...

chitra chennagide. chitrisuvudannu bidabeda. nodi kushi ayitu.
mala

Ramesh said...

Chaitrika.. Nimma painting chennagide... Khanditha nimma ee havyasavannu bidade munduvarisi.. nimma yella prayatnagalige protsaaha siguttademba bharavaseyinda munnuggi... saadhisi... All the best...

nanna blog http://hrudayantharaala.blogspot.com/ gu omme bheti needi... nimma anisikegalannu vyakta padisi...

Chaithrika said...

ಶನಿವಾರ ಮೆಜೆಸ್ಟಿಕ್ ನಿಂದ ಹೊರಟು, ನಡೆದು ನಡೆದು, ಭಾಸ್ಕರ ಆರ್ಟ್ಸನ್ನು ಹುಡುಕಿ ಹಾಳೆ ಕೊಂಡು ಬಂದೆ. ಕಟ್ಟು ಬಿಚ್ಚಲಿಲ್ಲ ಇನ್ನೂ...

ಚುಕ್ಕಿಚಿತ್ತಾರ said...

ಚೈತ್ರಿಕಾ,

ನೀವು ತು೦ಬಾ ಚೆನ್ನಾಗಿ ಪೇ೦ಟಿ೦ಗ್ ಮಾಡಿದ್ದೀರಿ...
ನನಗೆ ಪೆನ್ಸಿಲ್ ಶೇಡಿ೦ಗ್ ಮಾಡುವುದರಲ್ಲಿ ಆಸಕ್ತಿಯಿದೆ...
ನಿಮ್ಮ ಚಿತ್ರವನ್ನು ನೋಡಿ ಮತ್ತು ಉಳಿದವರಿ೦ದ ಮಾಹಿತಿ ಸಿಕ್ಕಿದ್ದು ಅನುಕೂಲವಾಯಿತು. ವ೦ದನೆಗಳು.

Raghu said...

ಚೈತ್ರಿಕಾ ಅವರೇ... ವಾಟರ್ ಪೇಂಟಿಂಗ್ ಚೆನ್ನಾಗಿದೆ... ಹೀಗಿ ಬಿಡಿಸುತ್ತಾ ಇರಿ... ನಿಮ್ಮ ಬ್ಲಾಗ್ ನಲ್ಲಿ ಫಾಲ್ಲೌ ಮಾಡ್ಲಿಕ್ಕೆ ಲಿಂಕ್ ಇಡಿ... ಇಗ ಆಗ್ತಾ ಇಲ್ಲ...
ನಿಮ್ಮವ,
ರಾಘು.

ಜಲನಯನ said...

ಚೈತ್ರಿಕಾರವರೇ, ಇಲ್ಲಿ ಬ್ಲಾಗು ಮಿತ್ರರ ಆತ್ಮೀಯತೆ ಹೇಗೆಂಬುದು ಈಗಾಗಲೇ ನಿಮಗೆ ಅನುಭವವಾಗಿರಬೇಕು.... ನಮ್ಮ ಮಿತ್ರರು ಕಥೆ, ಕವನ, ಹರಟೆ, ಪ್ರಹಸನ. ಪ್ರವಾಸ ಕಥನ, ಅನುಭವ ಪ್ರಕಟಣೆ..ಅಲ್ಲದೇ ಛಾಯಾಚಿತ್ರ (ನಮ್ಮ ಬಹು ಹೆಸರಾಂತ ಶಿವು, ಮಲ್ಲಿ, ಅಗ್ನಿ, ಪ್ರಕಾಶ್), ರೇಖಾಚಿತ್ರ (ಚುಕ್ಕಿಚಿತ್ತಾರ, ಮತ್ತಿತರರು), ಸೈನ್ಸ್ ಬ್ಲಾಗಿಗಳು (ಸೀತಾರಂ,ಸುಮ, ರೂಪಶ್ರೀ), ವ್ಯಂಗ್ಯ ಚಿತ್ರಕಾರರು (ದಿಲೀಪ್ ಮತ್ತಿತರು), ಭಾಷೆಯ, ಸಾಹಿತ್ಯದ ಬ್ಲಾಗಿಗಳು..(ಸುನಾಥ್, ಉದಯ್, ವಿ.ಅರ್.ಭಟ್), ವಿಶೇಷ ಹವ್ಯಾಸ ಸಂಗ್ರಹ ಲೇಖನ (ಗುರು)...ಹೀಗೆ ಎಲ್ಲರೂ ಇದ್ದಾರೆ..ನಿಮ್ಮ ಚಿತ್ರ ಕಲೆ ನಮ್ಮ ಈ ಕೂಟದ ಸಿರಿಯನ್ನು ಹೆಚ್ಚಿಸುತ್ತೆ...ಮುಮ್ದುವರೆಸಿ...

Chaithrika said...

ರಾಘು ಅವರೇ,
ನನಗೆ ಹೇಗೆ ಲಿಂಕ ಇಡಬೇಕೆಂದು ತಿಳಿದಿಲ್ಲ. ನಾನು ಎಡ ಮೂಲೆಯಲ್ಲಿ ಸರ್ಚ್ ಬಾಕ್ಸ್ ಬಳಿ "Follow" ಎಂಬುದನ್ನು click ಮಾಡಿದರೆ ಫಾಲ್ಲೋ ಮಾಡಲಾಗುತ್ತದೆ ಎಂದುಕೊಂಡಿದ್ದೆ.

ವನಿತಾ / Vanitha said...

Nice paintings:-)