Thursday, August 15, 2013

ಪ್ರಶ್ನೆಗಳ ಸುಳಿಯಲಿ್ಲ…

ನಾನು ಹುಟ್ಟಿದ ಮೇಲೆ ಮೂವತ್ತು ಸ್ವಾತಂತ್ರ್ಯ ದಿನಾಚರಣೆಗಳು ಕಳೆದವು. ಹಿಂದೆ ಶಾಲೆಯಲ್ಲಿ ತುಂತುರು ಮಳೆಗೆ ಧ್ವಜದ ಎದುರು ನಿಂತು ಸೆಲ್ಯೂಟ್ ಹೊಡೆದುದು, ಐವತ್ತು ಪೈಸೆ ಚಾಕಲೇಟು ಪಡೆದು, ಮುಖೋ್ಯಪಾಧ್ಯಾಯರ ಭಾಷಣ ಕೇಳಿ ಮರಳುತ್ತಿದ್ದುದು ಈಗ ಮಾಸಿ ಹೋದ ನೆನಪು. ಅದರ ನಂತರ ಅನೇಕ ಸ್ವಾತಂತ್ರ್ಯ ಸಂಗ್ರಾಮ ಸಂಬಂಧಿ ಪುಸ್ತಕಗಳನ್ನು ಓದಿ, ದೇಶಕ್ಕಾಗಿ ಹೋರಾಡಿ ಮಡಿದವರ ಕಥೆಗಳನ್ನು, ಘಟನೆಗಳನ್ನು ಕಲ್ಪಿಸುತ್ತಾ ಬೆಳೆದು ದೊಡ್ಡವರಾದೆವು. ಮುಂದೆ ಬದುಕು ಕಟ್ಟಿಕೊಳ್ಳಬೇಕಾದ ಓಟ(?)ದಲ್ಲಿ ಸ್ವಾತಂತ್ರ್ಯದ ಬಗೆಗಿನ ಪುಸ್ತಕಗಳು ಎಲೋ್ಲ ಹಿಂದೆ ಬಿದ್ದವು. ಈಗ ನಾನು ಒಂದು ವರುಷದ ಮಗುವಿನ ಅಮ್ಮ. ಕೆಲ ವರ್ಷಗಳಲ್ಲಿ ನನ್ನ ಮಗು ನನ್ನಂತೆಯೇ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲು ಹೋಗುವಳೆಂಬ ಕಲ್ಪನೆಯೇ ನನ್ನನ್ನು ಒಂದು ಗೊಂದಲದಲ್ಲಿ ಬೀಳಿಸಿದೆ.

"ಅಮ್ಮ ಸ್ವಾತಂತ್ರ್ಯ ಅಂದರೆ ಏನು?" ಎನ್ನುವ ಪ್ರಶ್ನೆಗೆ ನಾನು ಈ ಸಂದರ್ಭದಲ್ಲಿ ಹೇಗೆ ಉತ್ತರಿಸಬಲ್ಲೆ? ನನಗೆ ಸ್ವಾತಂತ್ರ್ಯ ಎಂದರೆ ಏನೆಂದು ತಿಳಿದಿದೆಯೇ? ನಾನು ಸ್ವಾತಂತೋ್ರ್ಯತ್ತರ ಭಾರತದಲ್ಲಿ ಹುಟ್ಟಿದವಳು. ದಾಸ್ಯದಲ್ಲಿ ಬದುಕು ಹೇಗಿರುತ್ತದೆ ಎಂಬುದು ಕಲ್ಪನೆಗೆ ನಿಲುಕದ್ದು. ಸ್ವತಂತ್ರ ಬದುಕನ್ನು ಹಂಬಲಿಸುವ ಮನಸ್ಥಿತಿ ಹೇಗಿರುವುದೆಂದು ಊಹಿಸುವುದೂ ನನ್ನಿಂದ ಆಗಲಾರದು. ಇದು ನನ್ನ ತಪೇ್ಪ? ನಾನು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿತೇ್ತ? ಅಥವಾ ನನ್ನ ಹೆತ್ತವರು ಹೇಳಬೇಕಿತೇ್ತ? ನನ್ನ ಹೆತ್ತವರು ಸ್ವಾತಂತೋ್ರ್ಯತ್ತರ ಭಾರತದಲ್ಲಿ ಹುಟ್ಟಿರುವಾಗ ಅವರಿಂದಲೂ ಇದನ್ನು ಪ್ರಭಾವಶಾಲಿಯಾಗಿ ಹೇಳಲು ಸಾಧ್ಯವೇ? ಹೇಗೆ ಕಲ್ಪಿಸಲಿ? ಅಂಡಮಾನಿನ ಹವಳದ ದಂಡೆಗಳನೋ್ನ, ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ ಖಲೀಫಾವನೋ್ನ ನನ್ನೆದುರು ವರ್ಣಿಸಿದರೆ  ನನಗೆ ಎಷ್ಟು ಅರ್ಥವಾದೀತೋ, ಸ್ವಾತಂತ್ರ್ಯ ಸಂಗ್ರಾಮವೂ ಅಷೇ್ಡ ಎಂದು ಹೇಳಲು ನನಗೆ ದುಃಖವೂ ನಾಚಿಕೆಯೂ ಆಗುತ್ತದೆ. ಚಿತ್ರ ನೋಡಿದರೆ ನನಗೆ ಬುರ್ಜ ಖಲೀಫಾದ ಎತ್ತರ, ಅದರ ತುದಿಯಿಂದ ಕಾಣುವ ಜಗತ್ತಿನ ರೂಪ ಹೇಗೆ ಊಹೆಗೆ ನಿಲುಕಲಾರದೋ, ಸಾಗರದ ದಂಡೆಯಲ್ಲಿ ನಿಂತು ದಿಟ್ಟಿಸಿದರೆ ಅದರ ನಿಜ ವೈಶಾಲ್ಯ, ಅಗಾಧತೆ ಹೇಗೆ ಕಲ್ಪನೆಗೆ ನಿಲುಕದಾಗುತ್ತದೋ,  ಸ್ವಾತಂತ್ರ್ಯ ಸಂಗ್ರಾಮದ, ಸಹಸ್ರಾರು ದೇಶಭಕ್ತರ ಬಲಿದಾನದ ಕತೆಗಳು ಅವುಗಳ ನಿಜ ಸ್ವರೂಪವನ್ನು ನನಗೆ ಬಿತ್ತರಿಸಲಾರವು. ಇನ್ನು ನಾನು ಇದನ್ನು ನನ್ನ ಮುಂದಿನ ಪೀಳಿಗೆಗೆ ಹೇಗೆ ತಲುಪಿಸಿಯೇನು?

ಸ್ವಾತಂತ್ರ್ಯವೆಂದರೆ "ಬೇಕಾದ್ದು ಮಾಡುವುದು" ಎಂದು ಯೋಚಿಸುವವರು ಬಹಳ ಮಂದಿ. ಅನೇಕರ ಮನದಲ್ಲಿ ಸ್ವಾತಂತ್ರ್ಯಕ್ಕೂ ಸೇ್ವಚಾ್ಛಚಾರಕ್ಕೂ ವ್ಯತ್ಯಾಸವೇ ಇಲ್ಲದಾಗಿದೆ. "ಬೇಕಾದ್ದು ಮಾಡುವುದು" ಎಂದರೆ ಸೇ್ವಚೆ್ಛ. ಸ್ವಾತಂತ್ರ್ಯ ಎಂದರೆ ಅದರ ಜೊತೆ ಜವಾಬ್ದಾರಿಯೂ ಇರುತ್ತದೆ. ಅದನ್ನು ಅನುಭವಿಸಲು ಕೆಲವು ಕರ್ತವ್ಯಗಳೂ ಇರುತ್ತವೆ. ರಸ್ತೆಯಲ್ಲಿ ಬೇಕೆಂದಾಗ ಓಡಾಡುವ ಸ್ವಾತಂತ್ರ್ಯ ನಮಗಿದೆ. ಆದರೆ ಖುಷಿ ಬಂದಂತೆ ಕಸ ಎಸೆಯುವ ಅಧಿಕಾರ ಇಲ್ಲ. ಅದು ಸೇ್ವಚೆ್ಛ. ಸಂಪನ್ಮೂಲಗಳನ್ನು ಉಪಯೋಗಿಸುವ ಸ್ವಾತಂತ್ರ್ಯದೊಂದಿಗೆ ಅದನ್ನು ಕಾಪಾಡುವ ಜವಾಬ್ದಾರಿ ಹಾಗೂ ಕರ್ತವ್ಯ ನಮಗಿದೆ. ಇದನ್ನು ನಾನು ನನ್ನ ಮಗಳಿಗೆ ತಿಳಿಸಿ ಹೇಳಲು ಶಕ್ತನಾದೇನೇ? ಅಥವಾ ಇದನ್ನು ನಮಗೆ ಕಲಿಸಿದ ಮೇಷ್ಡರಂತಹಾ ಗುರುಗಳು ನನ್ನ ಮಗಳಿಗೆ ಸಿಗುವರೆಂದು ಭಾವಿಸಲೇ?

ಸಿನೆಮಾದಂತಹ ದೃಶ್ಯ ಮಾಧ್ಯಮ ಸ್ವಲ್ಲ ಮಟ್ಟಿಗೆ ನಮಗೆ ಸ್ವಾತಂತ್ರ್ಯದ ಅರಿವು, ಕಲ್ಪನೆ ಮೂಡಿಸೀತೇನೋ. ಆದರೆ ಅವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವೇ? ಲಭ್ಯವಿದ್ದರೂ ಪ್ರಭಾವ ಬೀರುವ ಮಟ್ಟಿಗೆ ಅವುಗಳ ಗುಣಮಟ್ಟವಿದೆಯೇ? ನಾನು ಸಂಪೂರ್ಣ ಗೊಂದಲದಲ್ಲಿದೇ್ದನೆ. ನಾನು ಇದನ್ನು ಅರಿಯಲು ಹೆಚ್ಚಿನ ಪ್ರಯತ್ನ ಮಾಡಬೇಕಿತೇ್ತ? ಅಥವಾ ಇದರಲ್ಲಿ ನನ್ನ ತಪ್ಪು ಇಲ್ಲವೇ? ಉದ್ದದ ವಾಕ್ಯವನ್ನು ಅನೇಕರು ಒಬ್ಬರಿಂದ ಒಬ್ಬರಿಗೆ ಪಿಸುಗುಟ್ಟುತ್ತಾ ಹೋಗುವ ಆಟವೊಂದಿದೆ. ಕೊನೆಯವನು ತಾನು ಕೇಳಿದ್ದನ್ನು ಜೋರಾಗಿ ಹೇಳುವಾಗ ವಾಕ್ಯ ಅರ್ಧರ್ಧವಾಗಿ, ಅರ್ಥ ಅನರ್ಥವಾಗಿ ನಗು ತರಿಸುತ್ತದೆ. ಹಾಗೆಯೇ ನಮ್ಮ ದೇಶದ ನೆತ್ತರ ಕಥೆಗಳು ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಾ ತೂಕ ಕಳೆದುಕೊಂಡು, ಕೊನೆಗೆ ಹಲವರು ಹಲವು ರೀತಿ ಅರ್ಥ ಮಾಡಿಕೊಂಡು tea time ನ argument ಗಳಿಗೆ ಸೀಮಿತವಾಗುತ್ತಿರುವುದು ವಿಪರ್ಯಾಸ. ಇದಕ್ಕೆ ಹಳಿಯಬೇಕಾದ್ದು ಯಾರನ್ನು?

ಗೊಂದಲ ಸಿಕ್ಕಾಪಟ್ಟೆ ಆಗಿ, ತಲೆ ಕೆಟ್ಟು, ನೋಯತೊಡಗಿ ನಿದ್ರೆ ಹೋಗುತೇ್ತನೆ.

No comments: