Monday, May 10, 2010

Communication skills ಎಂದರೇನು?

ಹೋದ ತಿಂಗಳು interpersonal effectiveness ಎನ್ನುವ ತರಬೇತಿ ಕಾರ್ಯಕ್ರಮವನ್ನು ನಮ್ಮ ಆಫೀಸು ನಡೆಸಿದ್ದು ನಾನು ಅದರಲ್ಲಿ ಭಾಗಿಯಾಗಬೇಕಾಯಿತು. ಸಹೋದ್ಯೋಗಿಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕೆನ್ನುವುದರ ಬಗ್ಗೆ ತರಬೇತಿ. ಎರಡು ದಿನದ ಕಾರ್ಯಕ್ರಮ ಚೆನ್ನಾಗಿತ್ತು. ಕೆಲಸವಿಲ್ಲದ ಎರಡು ದಿನ ಮೋಜಿನಿಂದಲೂ ಕಳೆಯಿತು.
ವಾರದಲ್ಲಿ ಕನಿಷ್ಠ ನಾಲ್ಕು ದಿನ ಇಪ್ಪತ್ತು ನಿಮಿಷಗಳಿಗೆ ಕಮ್ಮಿಯಿಲ್ಲದಂತೆ ಫೋನಿನಲ್ಲಿ ಹರಟುವ ನನ್ನ ಗೆಳತಿಗೆ ಫೋನು ಮಾಡಿದೆ. ತರಬೇತಿ ಕಾರ್ಯಕ್ರಮದ ಬಗ್ಗೆ ಹೇಳಿದೆ. ವಿಷಯ ಮಾತನಾಡುತ್ತಾ communication skills ನತ್ತ ತಿರುಗಿತು.

"ನನ್ನ ಪರಿಚಯದವನೊಬ್ಬ ತಾನು ಮದುವೆಯಾಗಲಿರುವ ಹುಡುಗಿಯ ಫೋಟೋವನ್ನು social networking site ಅಲ್ಲಿ ಹಾಕಿ ಬಹಳ ಚೆನ್ನಾಗಿರುವ ವಾಕ್ಯಗಳನ್ನು ಬರೆದಿದ್ದಾನೆ" ಎಂದೆ.

"ನಾನೂ ಅಂಥ ಅನೇಕ ಜನರನ್ನು ನೋಡಿದ್ದೇನೆ" ಎಂದಳು.

"ನಾನು ಉಡುಪಿಯಲ್ಲಿ ಯಾರದ್ದೋ ಮನೆ ಕೇಳಿಕೊಂಡು ಬಂದ ಅಪರಿಚಿತ ಹುಡುಗನ ಬಳಿ ಸುಮಾರು ಇಪ್ಪತ್ತು ನಿಮಿಷ ಹರಟಿ ಕೊನೆಯಲ್ಲಿ ಅವನು ಫೋನ್ ನಂಬರ್ ಕೇಳಿದಾಗ ಎಚ್ಚೆತ್ತುಕೊಂಡೆ. ಅಷ್ಟು ಮಾತಾಡಲು ಕಾರಣ ಅವನ ಮಾತಿನ ಶೈಲಿ, communication skills. ಕೊನೆಗೆ ನಾನು ಪೇಯಿಂಗ್ ಗೆಸ್ಟ್ ಆಗಿದ್ದ ಕಡೆ ಆಂಟಿಯನ್ನು ಕೇಳಿದಾಗ ಅವನ ಕೆಲಸವೇ ಅದು, ಸಿಕ್ಕಿದವರ ಜೊತೆ ಗಂಟೆಗಟ್ಟಲೆ ಹರಟುತ್ತಾನೆ ಎಂದರು" ಎಂದೆ.

"ಹೌದು. ಚೆನ್ನಾಗಿ ಮಾತನಾಡುವವರು ಎಂಥವರನ್ನೂ ಮರುಳು ಮಾಡಬಲ್ಲರು" ಎಂದಳು.

"ನನ್ನ ಗೆಳೆಯನೊಬ್ಬ ನೋಡಲು ಚಂದ ಇಲ್ಲ. ಆದರೆ ಮಾತನಾಡುವುದರಲ್ಲಿ ಬಲು ಜಾಣ. ಈ communication skills ನಿಂದಾಗಿ ಅವನಿಗೆ ಸುಂದರಿಯಾದ girl friend ಇದ್ದಾಳೆ" ಎಂದು ನಕ್ಕೆ.

"ಹಾಗಾದರೆ communication skills ಎಂದರೆ ನಿಜವಾಗಿ ಜನರನ್ನು ಮಂಗಮಾಡುವುದು ಎಂದಾಯಿತಲ್ಲವೇ?" ಎಂದಳು.
(ಮಂಗಳೂರು ಕನ್ನಡದಲ್ಲಿ ಮಂಗಮಾಡುವುದು ಎಂದರೆ ಮೂರ್ಖರನ್ನಾಗಿಸುವುದು)

"ಹೌದಲ್ಲವೇ!!" ಎನ್ನುತ್ತಾ ಇಬ್ಬರೂ ಮನಸಾರೆ ನಕ್ಕೆವು. ಇಂದಿನವರೆಗೂ ಯೋಚಿಸಿದಾಗೆಲ್ಲ ಅವಳು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಕೆಲವೊಮ್ಮೆ ತರಬೇತಿ ಕಾರ್ಯಕ್ರಮಗಳೂ ಒಂದರ್ಥದಲ್ಲಿ ನಮ್ಮ ಕೆಲಸ ಸಾಧಿಸಲು ನಯ ವಿನಯಗಳ ಸೋಗು ಹಾಕಲು ಕಲಿಸುವುದು ಎಂದು ಅನ್ನಿಸುತ್ತದೆ.

9 comments:

ವಿ.ರಾ.ಹೆ. said...

>>"ಹಾಗಾದರೆ communication skills ಎಂದರೆ ನಿಜವಾಗಿ ಜನರನ್ನು ಮಂಗಮಾಡುವುದು ಎಂದಾಯಿತಲ್ಲವೇ?">>

ಒಮ್ಮೊಮ್ಮೆ ಹೌದು, ಒಮ್ಮೊಮ್ಮೆ ಅಲ್ಲ. ಸೋಗಿನ, ಕಲಿತ ಸ್ಕಿಲ್ಲು ವ್ಯಾವಹಾರಿಕವಾಗಿ ಮಾತ್ರ ಬಳಸಲು ಸಾಧ್ಯ. ಸಂಬಂಧಗಳಲ್ಲಿ ರಿಯಲ್ ಸ್ಕಿಲ್ ಇದ್ದರಷ್ಟೇ ಸಾಧ್ಯ. ;)

Chaithrika said...

Absolutely right ವಿ.ರಾ.ಹೆ.ಯವರೇ. ದಿನದಲ್ಲಿ 7-8 ಗಂಟೆ ವ್ಯವಹರಿಸುವ ಸಹೋದ್ಯೋಗಿಗಳ ಜೊತೆಯೂ ಹೆಚ್ಚಾಗಿ ರಿಯಲ್ ಸ್ಕಿಲ್ಲುಗಳೇ ಇರಲು ಸಾಧ್ಯವೇನೋ.

Shivanand PB said...

"Communication Skills" allows one to express and present himself/herself better...

How one uses it, for good or bad is a different question..

ಗೌತಮ್ ಹೆಗಡೆ said...

ಈ ಸ್ಕಿಲ್ ಎಲ್ಲ ಒಂಥರಾ ಮುಖವಾಡ ಇದ್ದಂಗೆ..

shivu.k said...

ಮೇಡಮ್,

communication skills ಅಂದರೆ ಮೂರ್ಖರನ್ನಾಗಿ ಮಾಡುವುದು ಅನ್ನುವುದು ಎಷ್ಟು ನಿಜವೋ, ಅಷ್ಟೇ ಅದರಿಂದ ತುಂಬಾ ಉಪಯೋಗವಿದೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಅದನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆನ್ನುವುದರ ಮೇಲೆ ಅದರ ಯಶಸ್ಸು ನಿಂತಿದೆ ಎನ್ನುವುದು ನನ್ನ ಭಾವನೆ...
ಚೆನ್ನಾದ ಬರಹಕ್ಕೆ ಧನ್ಯವಾದಗಳೂ.

Chaithrika said...

ನಿಜ. ನಾನು ಸ್ವಲ್ಪ ತಮಾಶೆಯಾಗಿರಲಿ ಎಂದು ಬರೆದೆ. communication skills ಬಗ್ಗೆಯಾಗಲೀ, ಇಂತಹ ತರಬೇತಿಗಳ ಬಗ್ಗೆಯಾಗಲೀ ನನಗೆ ವಿರೋಧ ಭಾವನೆಗಳೇನೂ ಇಲ್ಲ. ಕಮೆಂಟು ಬರೆದ ಎಲ್ಲ ಓದುಗರಿಗೂ ಧನ್ಯವಾದಗಳು :-)

ಜಲನಯನ said...

ಮಂಗಮಾಡೋಕೆ communication skills ಬೇಕಾಗೊಲ್ಲ ಸ್ವಾಮಿ...ಮಂಗ ಮಾರೋಕೆ ಬೇಕಾಗುತ್ತೆ...ಹಹಹ
Lets be serious a bit...communication skills ಅಂದ್ರೆ ನಮ್ಮ ಮಾತನ್ನು ಎದುರಿನವರು ಪೂರ್ಣ ಅರ್ಥಮಾಡಿಕೊಳ್ಳುವಂತೆ ಮಾಡುವುದು...ಅಷ್ಟೆ...communication aids ಉದಾಹರಣೆಗೆ..ಅವು ಉಪಕರಣಗಳು...ಅಷ್ಟೇ... ವ್ಯವಾಹಾರದಲ್ಲಿ ಮಾರಾಟದಲ್ಲಿ ಇದು ಚಾಕಚಕ್ಯತೆಯೂ ಆಗಿದೆ...ಹಾಗಾಗಿ ಮಂ.ಮಾ...ಮಾಡೋದು comparative ...ಅಲ್ವೇ..?

Dileep Hegde said...

:)

Nanda Kishor B said...

ಭಾವನೆಗಳು ಮನಸ್ಸಿನಲ್ಲಿ ರೂಪುಗೊಂಡಾಗ ಸಂವಹನ ಅದಾಗಿಯೇ ನಡೆದುಬಿದುತ್ತದೆ. ಬಹಳಾ ಚೆನ್ನಾಗಿ ಬರೆದಿದ್ದೀರಿ.