Monday, February 16, 2009

ಸಾಂಸ್ಕೃತಿಕ ದ್ವಂದ್ವ?

ಕೆಲವು ತಿಂಗಳುಗಳ ಹಿಂದೆ ಒಂದು ಮುಸ್ಸಂಜೆ Birthday party ಗೆ ಹೋಗಿದ್ದೆ. Birthday ಆಚರಿಸುತ್ತಿರುವ ಮಗು partyಯ ಕೇಂದ್ರ ಬಿಂದು. ಮನೆ ಪೂರ್ತಿ ಬಣ್ಣದ balloons. ಚಿಕ್ಕ ಮಕ್ಕಳೆಲ್ಲ ಸೇರಿ ಗಲಾಟೆ ಎಬ್ಬಿಸುತ್ತಾ ಕೇಕೆ ಹಾಕುತ್ತಿದ್ದುದು ನೋಡಲು ಬಲು ಮುದ ನೀಡುತ್ತಿತ್ತು. ಮಕ್ಕಳೆಲ್ಲ ಕಾತರದಿಂದ ಕಾಯುತ್ತಿದ್ದ cake cutting ಕಾರ್ಯಕ್ರಮ ಇನ್ನೇನು ಪ್ರಾರಂಭವಾಗುವುದರಲ್ಲಿತ್ತು. ಎಲ್ಲರ ಕೈಯಲ್ಲಿ ಬಣ್ಣ ಬಣ್ಣದ ಉಡುಗೊರೆ ಪೆಟ್ಟಿಗೆಗಳು.

Cherry, gemsನಿಂದ ಅಲಂಕರಿಸಿದ್ದ cake ತರಲಾಯಿತು. ಅದರ ಮೇಲೆ ಸಂಖ್ಯೆಯ ಆಕಾರದ ಮೇಣದ ಬತ್ತಿ. ಮೇಣದ ಬತ್ತಿ ಉರಿಸಲಾಯಿತು. ಅದನ್ನು ಊದಿ cake ಕತ್ತರಿಸಿ ಎಲ್ಲರೂ ತಿಂದಲ್ಲಿಗೆ ಮುಗಿಯಿತು ಎಂದು ಭಾವಿಸಿ ನಾನು ನೋಡುತ್ತಿದ್ದೆ. Birthday boy ಮೇಣದ ಬತ್ತಿ ಇನ್ನೇನು ಆರಿಸಬೇಕೆನ್ನುವಷ್ಟರಲ್ಲಿ "ಹಾಗಲ್ಲ!" ಎಂದು ಅವರಮ್ಮ ಕೂಗಿದರು. ನೋಡಿದರೆ "ಮೇಣದ ಬತ್ತಿ ಆರಿಸಬಾರದು" ಎನ್ನುತ್ತಾ ಅವರು ಒಂದು ತಟ್ಟೆ ಹಿಡಿದು ಬರುತ್ತಿದ್ದಾರೆ. ತಟ್ಟೆಯಲ್ಲಿ ನೀಲಾಂಜನದಂತಹ ಪುಟ್ಟ ದೀಪ. ಅವರು ಸುಮಾರು 5-5 ಜನರನ್ನು ಗಂಪಾಗಿ ಕರೆಯಲಾರಂಭಿಸಿದರು. ಎಲ್ಲರೂ ಸೇರಿ ಮಗುವಿಗೆ ಆರತಿ ಮಾಡಿದರು. ಕೊನೆಗೆ cake ಕತ್ತರಿಸಿದರು. ಉಡುಗೊರೆ ಕೊಟ್ಟಾದ ನಂತರ ಎಲ್ಲರಿಗೂ cake ಮತ್ತು snacks ಕೊಟ್ಟರು. snacks ಅಂದರೆ ಶ್ಯಾವಿಗೆ, ಹೋಳಿಗೆ, ಮಂಚೂರಿ, ಚಿಪ್ಸ್ ಇತ್ಯಾದಿ.

ಎಲ್ಲ ಮುಗಿದಾಗ 9 ಗಂಟೆಯಾಗಿರಬಹುದು. ಮನೆಗೆ ಹೊರಟಾಗ ನಾನು ಪತಿಯಲ್ಲಿ ಹೇಳಿದೆ...
"ಸಮಾರಂಭವೇನೋ ಚೆನ್ನಾಗಿತ್ತು. ನನಗೆ ಮಾತ್ರ ಕೆಲ ವಿಚಾರಗಳು ಇಷ್ಟವಾಗಲಿಲ್ಲ. Indian ಮತ್ತು western culture ಮಿಶ್ರಮಾಡಿ ಎರಡನ್ನೂ ಕೆಡಿಸುತ್ತಿದ್ದಾರೆ. ಅವರಿಗೆ ದೀಪ ಆರಿಸುವುದು ಇಷ್ಟವಿಲ್ಲ. ಆದರೆ cake ಕತ್ತರಿಸುವುದು ಬೇಕು. ಮುಸ್ಸಂಜೆ ದೀಪ ಹಚ್ಚಿ, 8 ಗಂಟೆಗೆ snacks ವಿತರಿಸುತ್ತಿದ್ದಾರೆ. ಇದರ ಬದಲು ಸಣ್ಣ ಔತಣ ಕೂಟ ಇಡಬಹುದಿತ್ತು. ಅಥವಾ ಸಂಜೆ cake cutting ಮತ್ತು snacks ಕೊಟ್ಟರೆ ಆಗಬಹುದಿತ್ತು. ಹೇಗೂ western ಕ್ರಮ ಬಳಸುವರಂತೆ, ಮೋಂಬತ್ತಿ ಆರಿಸಹೊರಟಾಗ ಭಾರತೀಯತೆ ಯಾಕೆ ಕಾಡಬೇಕು? ಮುಂದೆ cake ಇರಿಸಿ, ಮಗುವನ್ನು ಸೇರಿಸಿ cake ಗೂ ಆರತಿ! ನನಗೇಕೋ ಇದು ಬಹಳ odd ಅನ್ನಿಸಿತು. ಜನವರಿ 1ರಂದು ದೇವಸ್ಥಾನಕ್ಕೆ ಹೋದಂತೆ"

ಅವರ ಯೋಚನೆ ಮಾತ್ರ ನನ್ನ ಯೋಚನೆಗಿಂತ ಭಿನ್ನವಾಗಿತ್ತು. "ಮಕ್ಕಳು ಬೇರೆ ಕಡೆಗಳಲ್ಲಿ, TV ಕಾರ್ಯಕ್ರಮಗಳಲ್ಲಿ, Birthday ನೋಡುತ್ತಾರೆ. ತಮಗೂ ಅದೇ ತರಹದ ಆಚರಣೆ ಬೇಕು ಎಂದು ಬಯಸುತ್ತಾರೆ. ಮನೆಗಳಲ್ಲಿ ಹಿರಿಯರು ಇದ್ದರೆ, ಅಥವಾ Birthday ಯಂದು ಬಂದರೆ, ಅವರು ಭಾರತೀಯ ಕ್ರಮದಲ್ಲಿ ಆಚರಿಸಲು ಬಯಸಿಯಾರು, ಇಲ್ಲದಿದ್ದರೆ western ಕ್ರಮವನ್ನು ಸುಲಭವಾಗಿ ಸ್ವೀಕರಿಸಲಾರದೆ ಹೋದಾರು. ಯಾರಿಗೂ ಮನಸ್ಸಿಗೆ ಬೇಸವಾಗದಿರಲಿ ಅಂತ ಹೀಗೆ ಕ್ರಮಗಳನ್ನು ಬೆರೆಸುತ್ತಿರಬಹುದು. ನನಗೆ ಅದರಲ್ಲಿ odd ಆದದ್ದೇನೂ ಕಾಣಿಸುತ್ತಿಲ್ಲ" ಅಂದರು.

ಕೊನೆಗೂ ನಮಗೆ ಇಬ್ಬರಿಗೂ ಒಪ್ಪಿಗೆಯಾಗುವ ನಿರ್ಧಾರಕ್ಕೆ ಬರಲಾಗಲೇ ಇಲ್ಲ. "ಏನೇ ಆದರೂ ಇದನ್ನು cultural dilemma ಎನ್ನಬಹುದಷ್ಟೆ" ಎಂದು ಹೇಳಿದೆ. ಆನಂತರ ನಾವು ಇಷ್ಟರವರೆಗೆ ಆ ವಿಷಯ ಚರ್ಚಿಸಿಲ್ಲ. ಇಬ್ಬರೂ ಅವರವರ opinion ಗಳಲ್ಲೇ ಖುಶಿಯಾಗಿದ್ದೇವೆೆ!

2 comments:

ಹರಿಜೋಗಿ said...

ಚಿತ್ರಿಕಾರವರೆ,
ಅವರು ಹೇಳಿದ್ದು ಸರಿ. ನಾನೂ ನನ್ನ ಮಗಳ ಹುಟ್ಟುಹಬ್ಬ ಆಚರಣೆಗೆ ಇದೇ ರೀತಿ ದ್ವಂದ್ವ ಅನುಭವಿಸಿದ್ದೆ. ನೋಡಿ ಮೊತ್ತಮೊದಲಿಗೆ ಈ ರೀತಿ ಹುಟ್ಟುಹಬ್ಬ ಆಚರಿಸುವುದು ನಮ್ಮ ಸಂಪ್ರದಾಯ (ನೀವು ಸಂಸ್ಕೃತಿ ಎನ್ನಿ)ಅಲ್ಲ. ನಮ್ಮದೇನಿದ್ದರೂ ಹೊಸಬಟ್ಟೆ ಉಟ್ಟು ದೇವರಿಗೆ ದೀಪ ಹಚ್ಚಿ ಒಳ್ಳೇದುಮಾಡಪ್ಪಾ ಎಂದು ಬೇಡುವುದಷ್ಟೆ. ಆದರೆ ಈಗ ಟಿವಿ ಸಿನೆಮಾ ನೋಡಿ ಇಂಥಾ ಫ್ಯಾಶನ್ ಆರಂಭವಾಗಿದೆ. ಕೆಲವರು ತಮ್ಮ ದರ್ಬಾರ್ ತೋರಿಸಲಿಕ್ಕೆ ಗೌಜಿಯಿಂದ ಕಾರ್ಯಕ್ರಮ ಮಾಡ್ತಾರೆ. ಮಕ್ಕಳಿಗೆ ಅವು ಏನು ಗೊತ್ತಾಗುತ್ತವೆ? ಅವರ ಗೆಳೆಯರಿಗೆ ಹಾಗೆ ಮಾಡಿದ್ದಾರೆ ನಮಗೂ ಮಾಡಿ ಎಂದು ಹಟಗಟ್ಟುತ್ತವೆ.. ನಾವು ಈಗ ಏನು ಮಾಡೋಣ? ಮಕ್ಕಳಿಗೆ ಜೋರು ಮಾಡಿ ಸುಮ್ಮನಾಗಿಸುವುದೇ ಅಥವ ಆಚರಿಸುವುದೇ? ಈ ದಂದ್ವದಲ್ಲಿ ಹುಟ್ಟಿಕೊಂಡಿದ್ದು ಕೇಕ್ ಮತ್ತು ದೀಪ! ಮಕ್ಕಳಿಗೆ ಕೇಕ್ ಮುಖ್ಯ; ನೀವು ಮತ್ತೆ ಏನ್ ಮಾಡಿ ಬಿಡಿ. ಉಳಿದದ್ದನ್ನು ನಾವು ಬ್ಯಾಲೆನ್ಸ್ ಮಾಡಿಕೊಳ್ಳಬೇಕಷ್ಟೆ!!

Chaithrika said...

Thanks for the comment Wheel Deal :-)