tag:blogger.com,1999:blog-2942048231899528037.post7861015187791334529..comments2023-06-20T18:44:16.295+05:30Comments on ಸಿಹಿ ಬದುಕು: ಇಂಗ್ಲೀಷ್ ಭಾಷೆ… ಒಂದು "ಭಾಷೆ".Chaithrikahttp://www.blogger.com/profile/02731311200267214721noreply@blogger.comBlogger11125tag:blogger.com,1999:blog-2942048231899528037.post-22532397764973346192011-09-15T11:50:17.523+05:302011-09-15T11:50:17.523+05:30@ದೀಪಸ್ಮಿತಾ...
ಹೌದು…
ಇದು ಬರೀ ಕನ್ನಡಕ್ಕೆ ಸೀಮಿತ ಅಲ್ಲ ...@ದೀಪಸ್ಮಿತಾ...

ಹೌದು…
ಇದು ಬರೀ ಕನ್ನಡಕ್ಕೆ ಸೀಮಿತ ಅಲ್ಲ ಎಂದು ನನಗೂ ಇತ್ತೀಚೆಗೆ ಗೊತ್ತಾಗಿದೆ.
ನಾನು ತಮಿಳರೊಬ್ಬರ ಬೇರೆ ಬೇರೆ ತರಹದ "ಳ" ಉಚ್ಛಾರಗಳನ್ನು ಕೇಳಿ ಆಶ್ಚರ್ಯ ಪಡುತ್ತಾ "ನಿಮ್ಮ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?" ಎಂದು ಕೇಳಿದೆ. ಅವರು ಗೂಗಲ್ ಸರ್ಚ್ ಮಾಡಿದಾಗ ನಾನು ಪೆಚ್ಚು!Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-2942048231899528037.post-9858715263671596012011-09-15T10:13:36.979+05:302011-09-15T10:13:36.979+05:30ನಮ್ಮ ಮನೆಗೆ ಕನ್ನಡ ಓದು ಬರಹ ಕಲಿಯಲು ಎದುರು ಮನೆ ಮಕ್ಕಳು ಬ...ನಮ್ಮ ಮನೆಗೆ ಕನ್ನಡ ಓದು ಬರಹ ಕಲಿಯಲು ಎದುರು ಮನೆ ಮಕ್ಕಳು ಬರುತ್ತಾರೆ (ಶಾಲಾ ಪಠ್ಯದಲ್ಲಿ ಇದೆ ಎನ್ನುವ ಒಂದೇ ಕಾರಣಕ್ಕೆ). ಅವರ ಮನೆ ಮಾತು ತೆಲುಗು. ತೆಲುಗು ಬಂದರೆ ಕನ್ನಡದ ಅಕ್ಷರಗಳು ಕಷ್ಟವಿಲ್ಲ ಎಂದರೆ ಅವರಿಗೆ ತೆಲುಗು ಓದು ಬರಹ ಕೂಡ ಗೊತ್ತಿಲ್ಲ. ಮನೆಯಲ್ಲಿ ತಮ್ಮ ತಮ್ಮಲ್ಲಿ ಮತ್ತು ತಂದೆಯ ಜೊತೆ ಮಾತಾಡುವುದು ಬರೀ ಇಂಗ್ಲೀಶಿನಲ್ಲಿ. ಹೀಗಾಗಿ ಕನ್ನಡ ಹೋಗಲಿ, ತಮ್ಮ ಮಾತೃಭಾಷೆಯೇ ಅವರಿಗೆ ಅಷ್ಟು ಪರಿಚಿತವಿಲ್ಲ. ಇಂಗ್ಲೀಷ್ ಗೊತ್ತಿದ್ದರೆ ಮಾತ್ರ ಇಂದಿನ competetive ಯುಗದಲ್ಲಿ ಬದುಕಲು ಸಾಧ್ಯ ಎನ್ನುವ ಮನೋಭಾವ ಅತಿಯಾಗಿ ಬೆಳೆದಿರುವುದೇ ಇದಕ್ಕೆಲ್ಲ ಕಾರಣ. ಇಂಗ್ಲೀಶ್, ಹಿಂದಿ ಅಥವಾ ಯಾವುದೇ ಭಾಷೆ ಕಲಿಯಲಿ, ತಪ್ಪಿಲ್ಲ, ಆದರೆ ತಮ್ಮ ಮನೆ ಭಾಷೆಯನ್ನು, ಇರುವ ನಾಡಿನ ಭಾಷೆಯನ್ನು ಕಡೆಗಣಿಸುವ ಅಗತ್ಯವಿಲ್ಲ.

ನಾನು ಅವರಿಗೆ ಆಗಾಗ ಹೇಳುವುದು ಇಷ್ಟೇ-ಇಲ್ಲಿರುವಾಗ ಕನ್ನಡ ನೀವು ಕಲಿಯಲೇ ಬೇಕು, ಶಾಲೆ ಪಠ್ಯದಲ್ಲಿರಲಿ ಬಿಡಲಿ. ಅದೇ ರೀತಿ ನಿಮ್ಮ ಮನೆಯಲ್ಲಿ ನಿಮ್ಮ ಮಾತು, ಅಂದರೆ ತೆಲುಗು ಕಲಿಯಿರಿ, ಶಾಲೆಯಾಗಲಿ, ಪರೀಕ್ಷೆ ಇರಲಿ ಬಿಡಲಿ, ಅದು ಗೊತ್ತಿರಬೇಕು, ಇಂಗ್ಲೀಶಿಗಿಂತ ಹೆಚ್ಚು ಮುಖ್ಯವಾಗಿ ಎಂದು.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-2942048231899528037.post-11799540263779273742011-08-10T17:27:54.029+05:302011-08-10T17:27:54.029+05:30ತೀರಾ ಹಳ್ಳಿಗಳಲ್ಲಿ ಕೂಡ ಈ ಮನಸ್ಥಿತಿ ಬೆಳೆಯುತ್ತಿದೆ. ಲೇಖನ...ತೀರಾ ಹಳ್ಳಿಗಳಲ್ಲಿ ಕೂಡ ಈ ಮನಸ್ಥಿತಿ ಬೆಳೆಯುತ್ತಿದೆ. ಲೇಖನ ಇಷ್ಟ ಆಯ್ತು ಸಿಂಧೂ ಅಕ್ಕಪ್ರಿಯಾ ಕೆರ್ವಾಶೆhttps://www.blogger.com/profile/04203340630005229970noreply@blogger.comtag:blogger.com,1999:blog-2942048231899528037.post-83557338217290633072011-08-05T12:05:41.775+05:302011-08-05T12:05:41.775+05:30ನನ್ನ ಭಾವನೆಗೆ ಇಷ್ಟೊಂದು ಮಂದಿ ಸಹಮತ ಸೂಚಿಸುತ್ತಾರೆ ಎಂದು ...ನನ್ನ ಭಾವನೆಗೆ ಇಷ್ಟೊಂದು ಮಂದಿ ಸಹಮತ ಸೂಚಿಸುತ್ತಾರೆ ಎಂದು ನಾನು ಯೋಚಿಸಿರಲಿಲ್ಲ. ಖುಷಿ ಆಯಿತು. ಕಮೆಂಟು ಬರೆದ ಎಲ್ಲರಿಗೂ ಧನ್ಯವಾದ!!Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-2942048231899528037.post-43628929053664633962011-08-03T21:27:23.900+05:302011-08-03T21:27:23.900+05:30ಮೇಡಮ್,
ಇಂಗ್ಲೀಷ್ ಭಾಷೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್...ಮೇಡಮ್,
ಇಂಗ್ಲೀಷ್ ಭಾಷೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ..ನಿಮ್ಮ ಅನುಭವವೇ ನನಗೂ ತುಂಬಾ ಸಲ ಆಗಿದೆ. ಇಂಗ್ಲೀಷ್ ಭಾಷೆಯನ್ನು ಭಾಷೆಯಾಗಿ ನೋಡಬೇಕೆನ್ನುವ ನಿಮ್ಮ ಮಾತು ತುಂಭಾ ಇಷ್ಟವಾಯಿತು. ಸದ್ಯ ನನ್ನ ಶ್ರೀಮತಿ ಹಿಂದಿ ಕಲಿಯುತ್ತಿದ್ದಾಳೆ ಅದನ್ನು ಭಾಷೆಯಾಗಿ ಕಲಿಯುತ್ತಿರುವುದರಿಂದ ಅವಳಿಗೆ ಈಗ ಕೀಳರಿಮೆ ಅವಳ ಕಲಿಕೆಗೆ ನಾನು ಸಹಕರಿಸುತ್ತಿದ್ದೇನೆ. ಮತ್ತೆ ಮನೆಯಲ್ಲಿ ಹಿಂದಿ ಮಾತಾಡಲು ಪ್ರಯತ್ನಿಸುತ್ತಿದ್ದೇವೆ..ಬಹುಷಃ ಕೆಲವೇ ತಿಂಗಳುಗಳಲ್ಲಿ ಅವಳು ಹಿಂದಿ ಕಲಿಯಬಹುದು..
ನಿಮ್ಮದು ಅರ್ಥಪೂರ್ಣ ಲೇಖನ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2942048231899528037.post-31981611709775206532011-07-26T11:14:03.861+05:302011-07-26T11:14:03.861+05:30ಚಿಂತನಾರ್ಹ ಲೇಖನ... ಇಂಗ್ಲಿಷ್ ಒಂದು communication ಭಾಷೆ...ಚಿಂತನಾರ್ಹ ಲೇಖನ... ಇಂಗ್ಲಿಷ್ ಒಂದು communication ಭಾಷೆ ಆಗಬೇಕೆ ಹೊರತು ಅದು ನಮ್ಮ ಘನತೆಯನ್ನು ಹೆಚ್ಚಿಸುತ್ತದೆ ಎಂಬುದು ಸುಳ್ಳು...ಅಲ್ಲದೆ ನಮ್ಮ ಮಾತೃ ಭಾಷೆಯ ಬಗ್ಗೆ ಎಷ್ಟೋ ಜನರಿಗೆ ಅಸಡ್ಡೆ ಇದೆ...ಅದು ಸಲ್ಲ...

ನಾನು ಕನ್ನಡ ಪುಸ್ತಕ ಓದುವುದನ್ನು ನೋಡಿ ನನಗೆ ಎಷ್ಟೋ ಜನ ಈ ರೀತಿ ಕೇಳಿದ್ದರೆ..ಕನ್ನಡ ಓದ್ತಿಯ? ಕನ್ನಡ ಓದಕ್ಕೆ ಬರುತ್ತಾ? ಇಂಗ್ಲಿಷ್ ಬಿಟ್ಟು ಕನ್ನಡ ಓದ್ತಿಯ? ಅಂತ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-2942048231899528037.post-73267035972179065502011-07-17T13:18:09.858+05:302011-07-17T13:18:09.858+05:30'ಬಹುಶಃ ನಾವು ಇಂಗ್ಲೀಷ್ ಅನ್ನು ಒಂದು ಭಾಷೆಯ ರೂಪದಲ್ಲಿ...'ಬಹುಶಃ ನಾವು ಇಂಗ್ಲೀಷ್ ಅನ್ನು ಒಂದು ಭಾಷೆಯ ರೂಪದಲ್ಲಿ ನೋಡುತ್ತಲೇ ಇಲ್ಲ. ಅದರ ಜೊತೆ ನಮ್ಮ prestige, pride ಅನ್ನು ಅಂಟಿಸಿಕೊಳ್ಳುತ್ತೇವೆ..........ಇಂಗ್ಲೀಷ್ ಅನ್ನು ಇತರ ಭಾಷೆಗಳಂತೆ ಒಂದು communication ನ ಮಾಧ್ಯಮವಾಗಿ ನೋಡಿದರೆ ಏನೂ ಸಮಸ್ಯೆಯೇ ಇರಲಿಕ್ಕಿಲ್ಲ ಅಲ್ಲವೇ?' ಚಿ೦ತನಯೊಗ್ಯ ಸಾಲುಗಳು. ಭಾಷೆಯ ಬಗ್ಗೆ ಬಹಳ ಉತ್ತಮವಾದ ಸ್ವಾನುಭವ ಲೇಖನ. ಅಭಿನ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-2942048231899528037.post-77235302350130333252011-07-15T18:13:35.805+05:302011-07-15T18:13:35.805+05:30wonderfully writtten
nimma maatige sampoorna saha...wonderfully writtten

nimma maatige sampoorna sahamatavideಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2942048231899528037.post-50444178642021827262011-07-11T13:55:40.318+05:302011-07-11T13:55:40.318+05:30yes it is true in most cases...nice article chai:)...yes it is true in most cases...nice article chai:) (kannadadalli type madalu matra inno kalibekashte!!)
kannadam gelge ...englishoo balali!!aparnahttps://www.blogger.com/profile/04345970988886513844noreply@blogger.comtag:blogger.com,1999:blog-2942048231899528037.post-59654435617737907682011-07-09T21:38:49.382+05:302011-07-09T21:38:49.382+05:30ಈ ವಿಚಾರಕ್ಕೆ ನನ್ನದು ಪೂರ್ತಿ ಸಹಮತವಿದೆ. ಶಿಕ್ಷಣ ಮಾಧ್ಯಮದ...ಈ ವಿಚಾರಕ್ಕೆ ನನ್ನದು ಪೂರ್ತಿ ಸಹಮತವಿದೆ. ಶಿಕ್ಷಣ ಮಾಧ್ಯಮದ ವಿಷಯದಲ್ಲಿ ನಾನು ಕೂಡ ನಿಮ್ಮದೇ ರೀತಿ. ಇಂಗ್ಲೀಷ್ ಅನ್ನು ಇತರ ಭಾಷೆಗಳಂತೆ ಒಂದು communication ನ ಮಾಧ್ಯಮವಾಗಿ ನೋಡಿ, ಅದನ್ನು ಇತರ ಭಾಷೆಗಳ ತರಹ ಒಂದು ಭಾಷೆ ಅಂತ ಅಂದುಕೊಳ್ಳದೇ ಅದನ್ನು ಈ ’ಸ್ಟೇಟಸ್’ಗೆ ಸೇರಿಸುವುದು ಭಾರತೀಯರ ಕೀಳರಿಮೆಗುಣ ಕಾರಣ. ಹಿಂದೆ ಇಂಗ್ಲೀಷು ಆಳುವ ಬ್ರಿಟಿಷರ ಭಾಷೆಯಾಗಿದ್ದರಿಂದ ಮತ್ತು ಆಗ ಇಂಗ್ಲೀಷ್ ಕಲಿತವರಿಗೆ ವಿಶೇಷ ಸ್ಥಾನ, ಉದ್ಯೋಗ ದೊರೆಯುತ್ತಿದ್ದುದರಿಂದ ಭಾರತೀಯರಿಗೆ ಇಂಗ್ಲೀಷ್ ಬಗ್ಗೆ ಒಂದು ಮೇಲರಿಮೆ ಬೆಳೆದು ಅದು ಪ್ರತಿಯೊಬ್ಬರ ಜೀನ್ಸಿನಲ್ಲೂ ಸೇರಿಹೋಗಿದೆ. ಇಂಗ್ಲೀಷ್ ಬರುವುದಿಲ್ಲ ಎಂದರೆ ಅಥವಾ ತಪ್ಪು ಮಾತಾಡಿದರೆ ಗೇಲಿ ಮಾಡುತ್ತಾರೆ. ಆದರೆ ತಮ್ಮದೇ ಮಾತೃಭಾಷೆ ಬರುವುದಿಲ್ಲ ಎನ್ನುವುದು ಮಾತ್ರ ಹಗುರ ವಿಷಯ ಆಗಿಬಿಡುತ್ತದೆ ಮತ್ತು ಕೆಲವರು ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕೂಡ. ಬ್ರಿಟಿಷರು ಆ ಕಾಲಕ್ಕೆ ಈ ’ಭಾರತೀಯ ಇಂಗ್ಲೀಷ’ರನ್ನು ಚೆನ್ನಾಗಿಯೇ ತಯಾರು ಮಾಡಿದರು. ಈಗ ಅವರಿಲ್ಲದಿದ್ದರೂ ಅದು ಹಾಗೇ ಮುಂದುವರೆದುಕೊಂಡು ಬರುತ್ತಿದೆ. ಯಾವ ಭಾಷೆ ಕಲಿಯುವುದೂ ತಪ್ಪಲ್ಲ ಮತ್ತು ಇಂಗ್ಲೀಷ್ ಬರದೇ ಇರುವುದೂ ತಪ್ಪಲ್ಲ. ಕೀಳರಿಮೆ ಬಿಟ್ಟು, ಯಾವುದನ್ನು ಎಲ್ಲಿಬೇಕೋ ಅಲ್ಲೇ ಇಟ್ಟು, ಬಳಸಿ ಈ ಪರಿಸ್ಥಿತಿ ಬದಲಾಯಿಸೋಣ ಅಲ್ಲವಾ ?ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-2942048231899528037.post-34438383570552830642011-07-09T20:32:14.334+05:302011-07-09T20:32:14.334+05:30ಬಹಳ ಚೆನ್ನಾದ ಬರಹ...:)ಬಹಳ ಚೆನ್ನಾದ ಬರಹ...:)Nanda Kishor Bhttps://www.blogger.com/profile/11379376216553296972noreply@blogger.com