Tuesday, March 17, 2009

IT ಎಂದರೆ ಮೂಗು ಮುರಿಯದಿರಿ

ಇವತ್ತು ಒಂದು forwarded mail ನೋಡಿದೆ. ಕನ್ನಡದ ಒಂದು ಬರಹ. IT ಯ ಬಗ್ಗೆ ಬರೆಯಲಾಗಿತ್ತು. ಅದರಲ್ಲಿ ಒಂದು ವಾಕ್ಯ ನನ್ನ ಮನಸಿಗೆ ತಾಗಿತು. "ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ ಕಲಿಸಿದೆ" ಎಂದಿತ್ತು. Recession ಆರಂಭವಾದಾಗಿನಿಂದ ಈ ರೀತಿಯ ಬರಹಗಳನ್ನು ನೋಡುವುದು ಹೊಸತಲ್ಲ. ಆದರೆ ಈ ಬಗ್ಗೆ ಸ್ವಲ್ಪ ಯೋಚಿಸಿದಾಗ ಬಹಳ ದುಃಖವಾಯಿತು.

ನಮ್ಮ ಓರಗೆಯ ಹುಡುಗನೊಬ್ಬ engineering ಮಾಡಬೇಕೆಂದು ಬಯಸಿದ್ದ. ಅದು ಅವನಿಗೆ ಸಾಧ್ಯವಾಗಿರಲಿಲ್ಲ. ಅವನ ಮನೆಯವರು ಸರಳ ಮಧ್ಯಮ ವರ್ಗದವರು. ಕೊನೆಗೆ ಡಿಗ್ರಿ ಕಲಿತು, post graduation ಮಾಡಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಏರು-ಪೇರುಗಳಾಗಿ ಅವನ ಮನೆಯವರು ಚಿಂತಾಕ್ರಾಂತರಾದ ದಿನಗಳು ಇದ್ದವು. ಕೊನೆಗೆ ಸಹಾಯಕ್ಕೆ ಬಂದದ್ದು IT field. IT ಕೆಲಸ ಸಿಕ್ಕ ನಂತರ ಆತನ ಮನೆಯವರು ನಿರಾಳವಾಗಿ ಉಸಿರಾಡಿದ್ದರು.

ನಮ್ಮ ಬಹಳ ಆಪ್ತ ಸಂಬಂಧಿ ಕಳೆದ ವರ್ಷ engineering ಮುಗಿಸಿ ಕೆಲಸಕ್ಕೆ ಸೇರಿದ್ದರು. ಅವನ ಇಷ್ಟ ಪ್ರಕಾರ non-IT ಉದ್ಯೋಗಕ್ಕೆ ಸೇರಿಕೊಂಡ. ನಾವೂ ಪ್ರೋತ್ಸಾಹಿಸಿದ್ದೆವು. ಎರಡು ಬಾರಿ ಉದ್ಯೋಗ ಬದಲಿಸಿದರೂ work culture ಸರಿಹೋಗದೆ ಬಿಟ್ಟು ಬಂದ. ಮನೆಯವರು ಚಿಂತೆಯಲ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಲಾರಂಭಿಸಿದ್ದಾರೆ.

ಇಲ್ಲಿ ಕೊಟ್ಟ ಉದಾಹರಣೆಗಳು IT ಯನ್ನು ಹೊಗಳಲಾಗಲೀ, ಇತರ field ಗಳನ್ನು ದೂರಲಿಕ್ಕಾಗಲೀ ಬರೆದುದಲ್ಲ. ಇಲ್ಲಿ ನಾನು ಹೇಳಹೊರಟದ್ದು ಜನರ ಬಗ್ಗೆ... ಜೀವನಕ್ಕಾಗಿ ಉದ್ಯೋಗ ಹಿಡಿಯಹೊರಟ graduateಗಳ ಬಗ್ಗೆ... ಅವರ ಬಗ್ಗೆ ಕಾಳಜಿವಹಿಸುತ್ತಾ, ಚಿಂತೆ ಮಾಡುತ್ತಾ ಇರುವ ಮನೆಯವರ ಬಗ್ಗೆ. ಇಲ್ಲಿರುವ ಎರಡು ಉದಾಹರಣೆಗಳಂತೆ ಅನೇಕವಿರಬಹುದು. ಅಂತೆಯೇ ಅನಿವಾರ್ಯವಾಗಿ IT ಉದ್ಯೋಗಹಿಡಿದವರೂ ಇರಬಹುದು. ಮನೆಯಲ್ಲಿ ಕಷ್ಟ ಪರಿಸ್ಥಿತಿ ಇರುವವರು ಮನೆಯವರ ತೊಂದರೆಗಳನ್ನು ಕಡಿಮೆ ಮಾಡಲು ಒಳ್ಳೆಯ ಪ್ರಯತ್ನದಿಂದ ಈ ಕೆಲಸ ಗಿಟ್ಟಿಸಿಕೊಂಡವರೂ ಇರಬಹುದು. ಇವರೆಲ್ಲರೂ ನಮ್ಮ ನಿಮ್ಮಂತೆಯೇ ಅಲ್ಲವೇ?

ಇಷ್ಟಕ್ಕೂ IT ಎಂದರೆ ಯಾಕಿಷ್ಟು ಮುನಿಸು? Work pressure ಕೆಲವೊಮ್ಮೆ ಅತಿಯೆನಿಸಿದರೂ ಮಾಡಲೇ ಬೇಕಾದ ಕೆಲಸ ಮಾಡುತ್ತಾ ದುಡಿಯುತ್ತಿರುವವರನ್ನು "ಕೂಲಿಗಳು" ಎಂದೇಕೆ ಗೇಲಿ ಮಾಡಬೇಕು? ಒಂದೆಡೆ ಎಲ್ಲ ಉದ್ಯೋಗಗಳೂ ಸಮಾನ ಎನ್ನುವವರು, ಇನ್ನೊಂದೆಡೆ "ಕೂಲಿ" ಎಂಬ ಪದಕ್ಕೆ ಕೀಳೆಂಬ ಅರ್ಥಬರುವಂತೆ ಈರೀತಿಯ ಹೋಲಿಕೆಗಳನ್ನೇಕೆ ಕೊಡಬೇಕು?

Recession ನಿಂದಾಗಿ ನಾವೂ confused ಆಗಿದ್ದೇವೆ. IT ದೂರುವ ಬರಹಗಳಿಗೆ ಉತ್ತರಿಸಬೇಕೆನಿಸಿದರೂ ಸೂಕ್ತ ಸಮಯ ದೊರಕುತ್ತಿಲ್ಲ. ಆದರೂ ಇಂದೇಕೋ ಬೇಸರಬಂದು ಬರೆಯುತ್ತಿದ್ದೇನೆ. ರಾತ್ರಿ ೧:೩೦ ಆಗಿದೆ. ನಾಳೆ officeಗೂ ಹೋಗಬೇಕು. ಕೊನೆಯದಾಗಿ ನಾನು ಕೇಳುವುದು ಇಷ್ಟೇ...

ಅಡಿಕೆ ಬೆಲೆ ಇಳಿದಾಗ ನಾವು, "ಬೆಲೆ ಇದ್ದಾಗ ಚಿನ್ನ, ಬಟ್ಟೆ ಅಂತ ಮೆರೆದರು. ಬೆಲೆ ಇಳಿದಾಗ ನೋಡು... ಚೆನ್ನಾಯಿತು ಅವರಿಗೆ" ಎಂದರೆ ಹೇಗಿರುತ್ತದೆ?

ಮಳೆ ಬಾರದೆ ಭೂಮಿ ಬಿರಿದು ಬೆಳೆ ಕಾಣದಾಗ "ಭೂಮಿಯನ್ನು ನಂಬಿ ಕೆಟ್ಟರು. ಬುದ್ಧಿ ಬರಬೇಕು ಅವರಿಗೆ" ಎಂದರೆ ಹೇಗಿರುತ್ತದೆ?

ಸರಕಾರ lecturers ನ ಹೊಸ appointments ರದ್ದುಗೊಳಿಸಿದಾಗ, "ಹೊಲ ಗದ್ದೆ ಬಿಟ್ಟು ಸರಕಾರಿ ಕೆಲಸದ ಆಸೆಗೆ ಬಿದ್ದ. ಹಾಗೇ ಆಗಬೇಕು ಅವನಿಗೆ" ಎಂದರೆ ಹೇಗಿರುತ್ತದೆ?

ಒಂದು ಪ್ರದೇಶದಲ್ಲಿನ court, ಹೊಸ cases ಆರಂಭಿಸಲಿಕ್ಕಿಲ್ಲ, ಹಳೇ cases ಮುಗಿಸಿ ನಿಲ್ಲಿಸಿಬಿಡುವುದು ಎಂದು ತೀರ್ಮಾನಿಸಿತ್ತು. ಅಂಥ ಸಂದರ್ಭ, "ಸುಳ್ಳು ಹೇಳುವ ವಕೀಲರಿಗೆ ತಕ್ಕ ಶಾಸ್ತಿಯಾಯಿತು. ಒಳ್ಳೆಯದು" ಎಂದರೆ ಹೇಗಿರುತ್ತದೆ?

ತೀರಾ ಜಾಸ್ತಿ ಎನಿಸಿತೇ? ಸರಿಯಾಗಿ ಯೋಚಿಸಿ ನೋಡಿ.
.